ನಟಿ ಕೀರ್ತಿ ಸುರೇಶ್ಗೆ ಕೊರೊನಾ ಪಾಸಿಟಿವ್
ಕೊರೊನಾ ಮೂರನೇ ಅಲೆ ದೇಶದಾದ್ಯಂತ ವ್ಯಾಪಿಸಿದೆ. ಪ್ರತಿದಿನ ಲಕ್ಷಾಂತರ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಮಧ್ಯೆ, ತೆಲುಗು ಮತ್ತು ತಮಿಳು ನಟಿ ಕೀರ್ತಿ ಸುರೇಶ್ ಕರೋನಾ ಸೋಂಕಿಗೊಳಗಾಗಿದ್ದಾರೆ.
Published: 11th January 2022 09:15 PM | Last Updated: 11th January 2022 09:16 PM | A+A A-

ಕೀರ್ತಿ ಸುರೇಶ್
ಹೈದರಾಬಾದ್: ಕೊರೊನಾ ಮೂರನೇ ಅಲೆ ದೇಶದಾದ್ಯಂತ ವ್ಯಾಪಿಸಿದೆ. ಪ್ರತಿದಿನ ಲಕ್ಷಾಂತರ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಮಧ್ಯೆ, ತೆಲುಗು ಮತ್ತು ತಮಿಳು ನಟಿ ಕೀರ್ತಿ ಸುರೇಶ್ ಕರೋನಾ ಸೋಂಕಿಗೊಳಗಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಶೀತದಿಂದ ಬಳಲುತ್ತಿದ್ದ ನಾಯಕಿ ಕೀರ್ತಿಸುರೇಶ್ ಇತ್ತೀಚೆಗಷ್ಟೇ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಈ ಪರೀಕ್ಷೆಗಳಲ್ಲಿ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಈ ವಿಷಯವನ್ನು ಸ್ವತಃ ನಾಯಕಿ ಕೀರ್ತಿ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
“ಸದ್ಯ ನಾನು ಮನೆಯಲ್ಲೇ ಐಸೊಲೇಶನ್ನಲ್ಲಿದ್ದೇನೆ. ಕರೋನಾಗೆ ಸೋಂಕಿಗೆ ವೈದ್ಯರ ಸೂಚನೆಗಳನ್ನು ಅನುಸರಿಸುತ್ತಿದ್ದೇನೆ, ನನ್ನನ್ನು ಭೇಟಿಯಾದವರು ಕರೋನಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಮುನ್ನೆಚ್ಚರಿಕೆ ವಹಿಸಬೇಕು” ಎಂದು ಮನವಿ ಮಾಡುತ್ತ ನಟಿ ಕೀರ್ತಿ ಸುರೇಶ್ ಟ್ವೀಟ್ ಮಾಡಿದ್ದಾರೆ.
ಕಳೆದೆರೆಡು ದಿನಗಳಲ್ಲೆ ಮಹೇಶ್ ಬಾಬು, ರಾಜೇಂದ್ರ ಪ್ರಸಾದ್, ತ್ರಿಶಾ, ಮಂಚು ಲಕ್ಷ್ಮಿ, ವರಲಕ್ಷ್ಮಿ ಶರತ್ ಕುಮಾರ್, ಮೀನಾ, ಥಮನ್, ರೇಣು ದೇಸಾಯಿ, ಅಕಿರಾ ಮತ್ತು ಇತರರು ಈಗಾಗಲೇ ಕೊರೊನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈಗ ಈ ಸಾಲಿಗೆ ನಟಿ ಕೀರ್ತಿ ಸುರೇಶ್ ಸೇರ್ಪಡೆಯಾಗಿದ್ದಾರೆ.