ಎಲ್ಲರ ಚಿತ್ತ 'ವಿಕ್ರಾಂತ್ ರೋಣ' ನಿರ್ದೇಶಕರತ್ತ: ಅನೂಪ್ ಭಂಡಾರಿಗೆ ಉತ್ತರ- ದಕ್ಷಿಣ ಭಾರತ ಸಿನಿಮಾ ನಿರ್ಮಾಪಕರ ಭರಪೂರ ಆಫರ್!
ವಿಕ್ರಾಂತ್ ರೋಣ ಫ್ಯಾಂಟಸಿ ಸಿನಿಮಾವನ್ನು ಫೆಬ್ರವರಿ 24 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಸುದೀಪ್ ಜೊತೆ ಅಶ್ವತ್ಥಾಮ ಸಿನಿಮಾಗಾಗಿ ಅನೂಪ್ ಭಂಡಾರಿ ಸಜ್ಜಾಗುತ್ತಿದ್ದಾರೆ.
Published: 11th January 2022 11:57 AM | Last Updated: 11th January 2022 01:08 PM | A+A A-

ಅನೂಪ್ ಭಂಡಾರಿ
ಸುದೀಪ್ ಅಭಿನಯದ "ವಿಕ್ರಾಂತ್ ರೋಣ" ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ವಿಕ್ರಾಂತ್ ರೋಣ ಫ್ಯಾಂಟಸಿ ಸಿನಿಮಾವನ್ನು ಫೆಬ್ರವರಿ 24 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಸುದೀಪ್ ಜೊತೆ ಅಶ್ವತ್ಥಾಮ ಸಿನಿಮಾಗಾಗಿ ಅನೂಪ್ ಭಂಡಾರಿ ಸಜ್ಜಾಗುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಮೂಲಕ ಅನೂಪ್ ಭಂಡಾರಿ ದೇಶದ ಪ್ರಮುಖ ನಿರ್ಮಾಪಕರ ಗಮನ ಸೆಳೆಯುತ್ತಿದ್ದಾರೆ. ಹಲವು ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರು ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿದ್ದಾರೆ.
ಪ್ರಸಿದ್ದ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ ಹೌಸ್ ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಅನ್ನಪೂರ್ಣ ಸ್ಟುಡಿಯೋಸ್ ಕೂಡ ತಮ್ಮ ಬ್ಯಾನರ್ ನಲ್ಲಿ ಕೆಲಸ ಮಾಡುವಂತೆ ಆಫರ್ ನೀಡಿದೆ ಎಂದು ತಿಳಿದು ಬಂದಿದೆ,. ಇದರ ಜೊತೆಗೆ ಹಿಂದಿ ಸಿನಿಮಾ ನಿರ್ಮಾಪಕರು ಕೂಡ ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಕ್ರಾಂತ್ ರೋಣ ಒಟಿಟಿ ರೈಟ್ಸ್ ಭಾರೀ ಮೊತ್ತ: ದಕ್ಷಿಣ ಭಾರತದಲ್ಲೇ ಇದು ಅತಿದೊಡ್ಡ ಆಫರ್!
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅನೂಪ್ ಭಂಡಾರಿ ಪ್ರತಿಕ್ರಿಯಿಸಿದ್ದು, ಸದ್ಯ ತಮ್ಮ ಗಮನ ಪೂರ್ಣವಾಗಿ ವಿಕ್ರಾಂತ್ ರೋಣ ಮೇಲಿದ್ದು, ಉಳಿದ ಎಲ್ಲಾ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಹೇಳಿದ್ದಾರೆ. ವಿಕ್ರಾಂತ್ ರೋಣ ಬಿಡುಗಡೆ ನಂತರ ಮುಂದಿನ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ವಿಕ್ರಾಂತ್ ರೋಣ ಸಿನಿಮಾಗಾಗಿ ಒಟಿಟಿ ಭಾರೀ ಆಫರ್ ನೀಡಿದ್ದು, ನಿರ್ಮಾಪಕ ಮಂಜುನಾಥ್ ಗೌಡ ಥಿಯೇಟರ್ ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದರು ಆಫರ್ ನಿರಾಕರಿಸಿದ್ದಾರೆ ಎನ್ನಲಾಗಿದೆ. "ವಿಕ್ರಾಂತ್ ರೋಣ" 55 ದೇಶಗಳಲ್ಲಿ 14 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.