ಅಜೇಯ್ ರಾವ್ ನಟನೆಯ 'ವಿಶಿಷ್ಟ ಪ್ರೇಮ ಕಥೆ' ಗೆ ಮಂಜು ಸ್ವರಾಜ್ ಆ್ಯಕ್ಷನ್-ಕಟ್!
ಲವ್ ಯು ರಚ್ಚು ಸಿನಿಮಾ ನಂತರ ನಟ ಅಜಯ್ ರಾವ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಡೈರೆಕ್ಷನ್ ನ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.
Published: 19th January 2022 12:29 PM | Last Updated: 19th January 2022 01:50 PM | A+A A-

ಅಜಯ್ ರಾವ್
ಲವ್ ಯು ರಚ್ಚು ಸಿನಿಮಾ ನಂತರ ನಟ ಅಜಯ್ ರಾವ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಡೈರೆಕ್ಷನ್ ನ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.
ವಿಶಿಷ್ಟ ಪ್ರೇಮಕಥೆಯುಳ್ಳ ಕೌಟುಂಬಿಕ ಸಿನಿಮಾಗಾಗಿ ಇಬ್ಬರು ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ, ಇನ್ನೂ ಹೆಸರಿಡದ ಸಿನಿಮಾವನ್ನು ಲೋಹಿತ್ ನಂಜುಂಡಯ್ಯ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರತಂಡ ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸ ಆರಂಭಿಸಿದೆ. ಅಜಯ್ ರಾವ್ ಕಥೆಗೆ ಹಸಿರು ನಿಶಾನೆ ತೋರಿದ್ದಾರೆ ಮತ್ತು ಮಂಜು ಸ್ವರಾಜ್ ತಂಡದೊಂದಿಗೆ ಪ್ರಸ್ತುತ ಸ್ಕ್ರಿಪ್ಟ್ನ ಅಂತಿಮ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಅಧಿಕೃತವಾಗಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಇದನ್ನೂ ಓದಿ: ನಟ ಅಜಯ್ ರಾವ್ ಮೇಕಪ್ ಮ್ಯಾನ್ ಕೊರೋನಾದಿಂದ ಸಾವು
ಪ್ರಮುಖ ನಾಯಕ ಅಜಯ್ ರಾವ್ ಮತ್ತು ನಿರ್ದೇಶಕ ಮಂಜು ಸ್ವರಾಜ್ ಅವರಲ್ಲದೆ, ನಿರ್ಮಾಪಕರು ಅಜನೀಶ್ ಲೋಕನಾಥ್ ಅವರನ್ನು ಸಂಗೀತ ನಿರ್ದೇಶಕರಾಗಿ ಮತ್ತು ಬಸವರಾಜ್ ಅರಸ್ ಸಂಕಲನಕಾರರಾಗಿ ಆಯ್ಕೆಯಾಗಿದ್ದಾರೆ. ಚಿತ್ರತಂಡ ಇನ್ನೂ ಛಾಯಾಗ್ರಾಹಕನನ್ನು ಅಂತಿಮಗೊಳಿಸಿಲ್ಲ.