ಗುಡ್ ಫ್ರೆಂಡ್ಸ್ ನ ಮೊದಲ ಪ್ರಾಜೆಕ್ಟ್: ಪ್ರಜ್ವಲ್ ದೇವರಾಜ್- ಪನ್ನಗಾಭರಣ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ!
ಸ್ನೇಹಿತರಾದ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪನ್ನಗಾಭರಣ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂದು ಇತ್ತೀಚೆಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
Published: 19th January 2022 12:00 PM | Last Updated: 19th January 2022 01:49 PM | A+A A-

ಪನ್ನಗಾಭರಣ ಮತ್ತು ಪ್ರಜ್ವಲ್ ದೇವರಾಜ್ ಹಾಗೂ ವಾಸುಕಿ ವೈಭವ್
ಸ್ನೇಹಿತರಾದ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಪನ್ನಗಾಭರಣ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂದು ಇತ್ತೀಚೆಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
ಈ ವಿಷಯವನ್ನು ನಟ ಮತ್ತು ನಿರ್ದೇಶಕ ಇಬ್ಬರು ಖಚಿತಪಡಿಸಿದ್ದು ಮಂಗಳವಾರ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ, ಚಿತ್ರಕ್ಕೆ ಕಥೆಯನ್ನು ಬಾಲಿವುಡ್ ಲೇಖಕ ಬಂದೀಶ್ ಬಂಡಿತ್ಸ್, ದಿ ಆಫೀಸ್ ಮತ್ತು ಕಾರವಾರ್ ಸಿನಿಮಾ ಗೆ ಕಥೆ ಬರೆದಿದ್ದ ಅಧಿರ್ ಭಟ್ ಬರೆದಿದ್ದಾರೆ.
ಈ ಸಿನಿಮಾವನ್ನು 'ಫಿಲ್ಮಿ ಫೆಲೋ ಸ್ಟುಡಿಯೋಸ್' ಅರ್ಪಿಸುತ್ತಿದ್ದು, ಆಲ್ ಓಶನ್ ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ‍್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಹೆಸರು ಇನ್ನೂ ಅಂತಿಮಗೊಳಿಸಿಲ್ಲ. ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿರಾಜ್ ಸಿಂಗ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದನ್ನೂ ಓದಿ: ವರ್ಷಪೂರ್ತಿ ಪ್ರಜ್ವಲ್ ದೇವರಾಜ್ ಬ್ಯುಸಿ: ನಿರ್ದೇಶಕ ಪನ್ನಾಗಭರಣ ಜೊತೆ 2 ಹೊಸ ಸಿನಿಮಾ!
ಪ್ರವೀಣ್ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ಸೇರಿದಂತೆ ಇತರ ತಾರಾಗಾಣದ ಹುಡುಕಾಟದಲ್ಲಿ ಚಿತ್ರತಂಡ ಇದೆ. ಈ ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಹೆಚ್ಚಾಗಿರಲಿವೆ ಎನ್ನಲಾಗಿದ್ದು, ಮೊದಲ ಬಾರಿಗೆ ಪನ್ನಗಾಭರಣ ಪೂರ್ಣ ಆಕ್ಷನ್ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ.
ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ಪನ್ನಗಾಭರಣ, ಈವರೆಗೆ 'ಹ್ಯಾಪಿ ನ್ಯೂ ಇಯರ್', ಪಿಆರ್‌ಕೆ ಪ್ರೊಡಕ್ಷನ್‌ಗಾಗಿ 'ಫ್ರೆಂಚ್ ಬಿರಿಯಾನಿ' ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಮಾಫಿಯಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಅದರ ಜೊತೆಗೆ ಹರಿಪ್ರಸಾದ್ ನಿರ್ದೇಶನದ ಜಕ್ಕಾ ಮತ್ತು ಕಿರಣ್ ನಿರ್ದೇಶನದ ಮತ್ತೊಂದು ಸಿನಿಮಾಗೂ ಸಹಿ ಮಾಡಿದ್ದಾರೆ, ಇದರ ಜೊತೆಗೆ ಪನ್ನಗಾಭರಣ ನಿರ್ದೇಶದನ ಸಿನಿಮಾಗೂ ಪ್ರಜ್ವಲ್ ಓಕೆ ಮಾಡಿದ್ದಾರೆ.