ಅಪ್ಪು ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ: ರಾಘವೇಂದ್ರ ರಾಜ್ ಕುಮಾರ್
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
Published: 21st January 2022 04:33 PM | Last Updated: 21st January 2022 04:48 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆರಂಭಿಸಿದ್ದ ಕನಸಿನ ಯೋಜನೆಗಳನ್ನು ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ಅವರ ಸಹೋದರ ನಟ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಪ್ಪು (ಪುನೀತ್ ರಾಜ್ ಕುಮಾರ್)ನ ಕನಸಿನ ಯೋಜನೆ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಪ್ಪುನ ಕನಸಿನ ಯೋಜನೆಗಳನ್ನು ಅತೀ ಶೀಘ್ರದಲ್ಲೇ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.
— Raghavendra Rajkuma al_) January 21, 2022
.
Taking ahead the vision and dream of Appu. We bring you 3 stories full of love, life and joy.@ashwinipuneet @PrimeVideoIN @PRK_Productions @PRKAudio pic.twitter.com/jo2HCBla9V
ಅಲ್ಲದೆ ಪುನೀತ್ ರ ಪಿಆರ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಸಿದ್ದವಾದ ಚಿತ್ರಗಳ ಪೋಸ್ಟರ್ ಅನ್ನು ರಾಘವೇಂದ್ರ ರಾಜ್ ಕುಮಾರ್ ಅಪ್ಲೋಡ್ ಮಾಡಿದ್ದಾರೆ. ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿರುವ ಮೂರು ಚಿತ್ರಗಳ ಮಾಹಿತಿಯನ್ನು ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದು, ಈ ಪೈಕಿ ನಟ ಡ್ಯಾನಿಷ್ ಸೇಠ್ ಅಭಿನಯದ, ಒನ್ ಕಟ್, ಟೂ ಕಟ್, ರಂಗಾಯಣ ರಘು ಅಭಿನಯದ ಫ್ಯಾಮಿಲಿ ಪ್ಯಾಕ್, ರಾಮ ರಾಮ ರೇ ಖ್ಯಾತಿಯ ನಟರಾದ ನಟರಾಜ್, ಧರ್ಮಣ್ಣ..ಶ್ರೀಧರ್ ಅಭಿನಯದ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.