ನನ್ನ ಬಹುದಿನಗಳ ಕನಸು ಈಗ ನನಸಾಯಿತು: ನಟಿ ಪೂಜಾ ಹೆಗ್ಡೆ
ಸಾಲು ಸಾಲು ಸಿನಿಮಾಗಳ ಯಶ್ಸಸ್ಸಿನಲ್ಲಿ ನಟಿ ಪೂಜಾ ಹೆಗ್ಡೆ ಇದ್ದಾರೆ. ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದರೆ ಆ ಸಿನಿಮಾ ಹಿಟ್ ಅನ್ನು ಮಟ್ಟಿಗೆ ಹೆಸರು ಮಾಡಿ ಮುನ್ನುಗ್ಗುತ್ತಿದ್ದಾರೆ. ಹೆಸರು ಮಾಡುವ ಜೊತೆಗೆ ಹಣ ಕೂಡ ಚೆನ್ನಾಗಿ ಗಳಿಸುತ್ತಿದ್ದಾರೆ.
Published: 22nd January 2022 08:22 PM | Last Updated: 22nd January 2022 08:22 PM | A+A A-

ಪೂಜಾ ಹೆಗ್ಡೆ
ಮುಂಬೈ: ಸಾಲು ಸಾಲು ಸಿನಿಮಾಗಳ ಯಶ್ಸಸ್ಸಿನಲ್ಲಿ ನಟಿ ಪೂಜಾ ಹೆಗ್ಡೆ ಇದ್ದಾರೆ. ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದರೆ ಆ ಸಿನಿಮಾ ಹಿಟ್ ಅನ್ನು ಮಟ್ಟಿಗೆ ಹೆಸರು ಮಾಡಿ ಮುನ್ನುಗ್ಗುತ್ತಿದ್ದಾರೆ. ಹೆಸರು ಮಾಡುವ ಜೊತೆಗೆ ಹಣ ಕೂಡ ಚೆನ್ನಾಗಿ ಗಳಿಸುತ್ತಿದ್ದಾರೆ. ಮುಂಬೈನಲ್ಲಿ ಮನೆ ಕಟ್ಟಿರುವ ಪೂಜಾ ಅವರು ತಮ್ಮ ಕನಸಿನ ಮನೆಗೆ ಒಂದು ವರ್ಷದ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನ ಶೇರ್ ಮಾಡಿದ್ದಾರೆ.
ಅದರಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ನಾಯಕಿ ಕೈಯಲ್ಲಿ ತೆಂಗಿನಕಾಯಿ ಹಿಡಿದು ಕುಳಿತಿದ್ದಾರೆ. ‘ಮನೆ ಕಟ್ಟುವ ನನ್ನ ಕನಸು ನನಸಾಗಿದೆ. ನಿಮ್ಮ ಆತ್ಮಸಾಕ್ಷಿ ಮತ್ತು ಕಠಿಣ ಪರಿಶ್ರಮವನ್ನು ನಂಬಿರಿ. ಈ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
‘ಒಕಾ ಲೈಲಾ ಕೋಸಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾದ ಪೂಜಾ ಹೆಗಡೆ. ‘ಮುಕುಂದ’ ಚಿತ್ರದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಸಿನಿಮಾಗಳಲ್ಲಿ ತಮ್ಮ ಪಾತ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ‘ಅಲ ವೈಕುಂಠಪುರಮುಲೋ’ ಚಿತ್ರದ ಮೂಲಕ ಮೋಸ್ಟ್ ವಾಂಟೆಡ್ ಹೀರೋಯಿನ್ ಆದರು.
ಇತ್ತೀಚೆಗೆ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ‘ಮೃಗ’, ‘ಆಚಾರ್ಯ’ ಮತ್ತು ‘ರಾಧೇಶ್ಯಾಮ್’ ಚಿತ್ರಗಳಲ್ಲಿ ತಮ್ಮ ನಟನ ವಿಶ್ವರೂಪವನ್ನು ಪ್ರದರ್ಶಿಸುತ್ತಿದ್ದಾರೆ.
1 year since this day of gratitude, for all the dreams fulfilled Just keep believing in yourself and work hard. The universe, truly falls in love with a stubborn heart #onwardsandupwards pic.twitter.com/84d2v7MRyR
— Pooja Hegde (@hegdepooja) January 21, 2022