ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತಿದೆ, ಈ ನಡುವೆ ಸೆನ್ಸಾರ್ ಮಂಡಳಿ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದೆ.
Published: 24th January 2022 01:09 PM | Last Updated: 24th January 2022 01:26 PM | A+A A-

ಚಾರ್ಲಿ ಸಿನಿಮಾ ಸ್ಟಿಲ್
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಲಾಗುತ್ತಿದೆ, ಈ ನಡುವೆ ಸೆನ್ಸಾರ್ ಮಂಡಳಿ ಸಿನಿಮಾಗೆ ಯು/ಎ ಪ್ರಮಾಣಪತ್ರ ನೀಡಿದೆ.
ಎಲ್ಲವೂ ಅಂದಕೊಂಡಂತೆ ಹಾಗಿದ್ದರೇ 777 ಚಾರ್ಲಿ ಡಿಸೆಂಬರ್ 31ರಂದು ರಿಲೀಸ್ ಆಗಬೇಕಿತ್ತು, ಆದರೆ ಸಿನಿಮಾಗೆ ಸರಿಯಾದ ನ್ಯಾಯಸಿಗುವುದಿಲ್ಲ ಎಂದು ತಿಳಿದು ಬಿಡುಗಡೆ ದಿನಾಂಕ ಮುಂದೂಡಲಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ಪಡೆದಿದ್ದಾರೆ. ಚಿತ್ರವನ್ನು ವೀಕ್ಷಿಸಿದ ಕೆಲವು ನಿರ್ಮಾಣ ಸಂಸ್ಥೆಗಳು ಮತ್ತು ವಿತರಕರಿಂದ ಭಾರೀ ರೆಸ್ಪಾನ್ಸ್ ಸಿಕ್ಕಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಪುನರಾರಂಭದ ಬಗ್ಗೆ ಸ್ಪಷ್ಟತೆ ದೊರೆತ ನಂತರ ಸಿನಿಮಾ ತಂಡವು ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದೆ.
ವಿವಿಧ ವಿತರಕರೊಂದಿಗೆ ಅಂತಿಮ ಚರ್ಚೆಯು ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗುವುದು,'' ಎಂದು ಕಿರಣ್ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 31 ರಂದು ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ' ತೆರೆಗೆ
777 ಚಾರ್ಲಿ ಸಿನಿಮಾವನ್ನು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಅವರ ಪರಮಾವ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅರವಿಂದ್ ಕಶ್ಯಪ್ ಕ್ಯಾಮೆರಾವರ್ಕ್ ನಿರ್ವಹಿಸಿದ್ದಾರೆ. ಚಲನಚಿತ್ರವು ಧರ್ಮ (ರಕ್ಷಿತ್ ಶೆಟ್ಟಿ) ಮತ್ತು ಚಾರ್ಲಿ ಎಂಬ ನಾಯಿಯ ನಡುವಿನ ಸಂಬಂಧ ಕುರಿತಾಗಿದೆ.
ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ತಮಿಳು ನಟ ಬಾಬ್ಬಿ ಸಿಂಹ ಅವರು 777 ಚಾರ್ಲಿಯೊಂದಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.