ಪ್ರಜ್ವಲ್ ದೇವರಾಜ್ ನಟನೆಯ 'ಮಾಫಿಯಾ' ಆಡಿಯೋ ಹಕ್ಕು ದುಬಾರಿ ಮೊತ್ತಕ್ಕೆ ಮಾರಾಟ!
ನಟ ಪ್ರಜ್ವಲ್ ದೇವರಾಜ್ ಮಾಫಿಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರೀ ರಿಲೀಸ್ ವ್ಯವಹಾರ ಕೂಡ ಈಗಾಗಲೇ ಉತ್ತಮವಾಗಿ ನಡೆಯುತ್ತಿದೆ.
Published: 25th January 2022 10:53 AM | Last Updated: 25th January 2022 01:20 PM | A+A A-

ಪ್ರಜ್ವಲ್ ದೇವರಾಜ್
ನಟ ಪ್ರಜ್ವಲ್ ದೇವರಾಜ್ ಮಾಫಿಯಾ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರೀ ರಿಲೀಸ್ ವ್ಯವಹಾರ ಕೂಡ ಈಗಾಗಲೇ ಉತ್ತಮವಾಗಿ ನಡೆಯುತ್ತಿದೆ.
ಮಾಫಿಯಾ ಸಿನಿಮಾ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಉತ್ತಮ ಬೆಲೆಗೆ ಖರೀದಿಸಿದೆ. ಇದುವರೆಗೆ ಪ್ರಜ್ವಲ್ ದೇವರಾಜ್ ಅಭಿನಯಿಸಿದ ಸಿನಿಮಾಗಳಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಡಿಯೋ ಇದಾಗಿದೆ ಎಂದು ತಿಳಿದು ಬಂದಿದೆ.
ನಿರ್ಮಾಪಕ ಬಿ. ಕುಮಾರ್ ಮತ್ತು ನಿರ್ದೇಶಕ ಎಚ್. ಲೋಹಿತ್ ಆಡಿಯೋ ಕಂಪನಿಯೊಂದಿಗೆ ಒಪ್ಪಂದ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: 'ಮಾಫಿಯಾ' ದಿಂದ ಗುರುದತ್ತ ಗಾಣಿಗ ಔಟ್: ಪ್ರಜ್ವಲ್ ಗೆ 'ದೇವಕಿ' ನಿರ್ದೇಶಕ ಲೋಹಿತ್ ಆ್ಯಕ್ಷನ್ ಕಟ್!
ಮಾಫಿಯಾ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಇದರಲ್ಲಿ 5 ಹಾಡುಗಳಿವೆ. ನವೆಂಬರ್‌ನಲ್ಲಿ ಆರಂಭವಾದ ಚಿತ್ರದ ಶೂಟಿಂಗ್ ಕೊರೋನಾ ಕಾರಣದಿಂದ ಅರ್ಧಕ್ಕೆ ನಿಂತಿದೆ. ಮಾಫಿಯಾದಲ್ಲಿ ಪ್ರಜ್ವಲ್ ದೇವರಾಜ್ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ. ಇದರಲ್ಲಿ ಪ್ರಜ್ವಲ್ ಅವರ ತಂದೆ, ಹಿರಿಯ ನಟ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು ಕುಮಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಮಾಫಿಯಾ ಸಿನಿಮಾಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಜಬಿನ್ ಜಾಕೋಬ್ ಛಾಯಾಗ್ರಹಣವಿದೆ.