
ಪಕ್ಕಾ ಮಾಸ್ ಸಿನಿಮಾ ಮದಗಜ ಯಶಸ್ವಿಯಾಗಿ 50 ದಿನಗಳನ್ನು ಪೂರ್ತಿಗೊಳಿಸಿರುವ ಸಂದರ್ಭದಲ್ಲಿ ಸಿನಿಮಾತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ
ನಿರ್ದೇಶಕ ಮಹೇಶ್ ಕುಮಾರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ನಾಯಕ ನಟ ಶ್ರೀಮುರಳಿ ಕಾಂಬಿನೇಷನ್ನಿನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರುವ ಸೂಚನೆಯನ್ನು ಮಹೇಶ್ ಕುಮಾರ್ ನೀಡಿದ್ದಾರೆ.
ಇದನ್ನೂ ಓದಿ: ದಿವ್ಯಾ ಸುರೇಶ್ ಅಭಿನಯದ ರೌಡಿ ಬೇಬಿ ಬಿಡುಗಡೆ ಫೆಬ್ರವರಿ 11ಕ್ಕೆ
ಸಿನಿಮಾ 50 ದಿನಗಳನ್ನು ಪೂರೈಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಹೇಶ್ ಕುಮಾರ್, ಕೊರೊನಾ ಸಂದರ್ಭದಲ್ಲಿ ತಮ್ಮ ಮದಗಜ ಸಿನಿಮಾ 50 ದಿನ ಪೂರೈಸಿರುವುದು ದೊಡ್ಡ ಸಾಧನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈಡರ್ ನಂತರ ಈಗ ನಿಖಿಲ್ ಕುಮಾರಸ್ವಾಮಿ 'ಯದುವೀರ'!