ಪುನೀತ್ ರಾಜ್ ಕುಮಾರ್ 'ಜೇಮ್ಸ್' ಸಿನಿಮಾ ಪೋಸ್ಟರ್ ಲಾಂಚ್: ಯೋಧನ ರೂಪದಲ್ಲಿ ಪವರ್ ಸ್ಟಾರ್
ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ 'ಜೇಮ್ಸ್' ಪೋಸ್ಟರ್ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.
Published: 26th January 2022 01:20 PM | Last Updated: 26th January 2022 01:28 PM | A+A A-

ಸಿನಿಮಾ ಪೋಸ್ಟರ್
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಮೊದಲ ಪೋಸ್ಟರ್ ಇಂದು 73ನೇ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಗಿದೆ.
ಇದನ್ನೂ ಓದಿ: ಪುನೀತ್ ಅಭಿನಯದ ಚಿತ್ರಗಳು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಫೆ.1ರಿಂದ ಒಂದು ತಿಂಗಳು ಉಚಿತವಾಗಿ ಲಭ್ಯ!
ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಈ ಪೋಸ್ಟರ್ ಅನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಗಣರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ಅಗಲುವಿಕೆ ನೋವಲ್ಲಿ ಚಿತ್ರೀಕರಣ ಮುಗಿಸಿದ 'ಜೇಮ್ಸ್' ತಂಡ: ವಿಶೇಷ ಪಾತ್ರದಲ್ಲಿ ಶಿವಣ್ಣ, ರಾಘಣ್ಣ!
ಜೇಮ್ಸ್ ಸಿನಿಮಾದ ಮೊದಲ ಪೋಸ್ಟರ್ #BoloBoloJames ಹ್ಯಾಶ್ ಟ್ಯಾಗ್ ಅಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ‘ಸಲಾಂ ಸೋಲ್ಜರ್ ದೇಶಕ್ಕೆ ನೀನೇ ಪವರ್’ ಎಂಬ ವಾಕ್ಯ ಪೋಸ್ಟರ್ ನಲ್ಲಿ ಹೈಲೈಟ್ ಆಗಿದ್ದು, ಪುನೀತ್ ರಾಜ್ ಕುಮಾರ್ ಸೈನಿಕ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಪುನೀತ್ ಫೋಟೋ ಫ್ರೇಮ್‌ಗಳಿಗೆ ಬೇಡಿಕೆ; ದೇವರ ಪಕ್ಕದಲ್ಲಿಟ್ಟು ಪೂಜಿಸುವ ಅಭಿಮಾನಿಗಳು!
ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್' ಸಿನಿಮಾ ನಿರ್ದೇಶಿಸಿದ್ದು, ಕನ್ನಡ ಮಾತ್ರವಲ್ಲದೆ ತಮಿಳು, ಹಿಂದಿ ತೆಲುಗು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಅಪ್ಪು ಮುದ್ದಾಡಿದ್ದ ಆನೆ ಮರಿಗೆ ಪುನೀತ್ ಹೆಸರು: ಅಗಲಿದ ನಟನಿಗೆ ಅರಣ್ಯ ಇಲಾಖೆಯಿಂದ ವಿಶೇಷ ಗೌರವ