'ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಮೂಲಕ ನಾಯಕನಾಗುತ್ತಿದ್ದಾರೆ ಅಚ್ಯುತ ಕುಮಾರ್
ಅಸಾಮಾನ್ಯ ಮತ್ತು ಆಸಕ್ತಿದಾಯಕ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅಚ್ಯುತ್ ಕುಮಾರ್ ಅವರು ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.
Published: 26th January 2022 12:45 PM | Last Updated: 27th January 2022 01:09 PM | A+A A-

ಫೋರ್ ವಾಲ್ಸ್ ಪೋಸ್ಟರ್
ಅಸಾಮಾನ್ಯ ಮತ್ತು ಆಸಕ್ತಿದಾಯಕ ಪೋಷಕ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅಚ್ಯುತ್ ಕುಮಾರ್ ಅವರು ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.
ಎಸ್.ಎಸ್.ಸಜ್ಜನ್ ನಿರ್ದೇಶನದ ಈ ಚಿತ್ರವು 80ರ ದಶಕದ ಕಥೆಯನ್ನು ಹೊಂದಿದೆ. “ಇದು ತಂದೆ ಮತ್ತು ಅವರ ವಯಸ್ಕ ಮಕ್ಕಳ (3 ಹುಡುಗಿಯರು ಮತ್ತು 1 ಹುಡುಗ) ಸುತ್ತ ಸುತ್ತುವ ಸಾಮಾಜಿಕ ನಾಟಕವಾಗಿದೆ. ಇದು ಗೃಹಿಣಿಯರ ಜೀವನವನ್ನು ಎತ್ತಿ ತೋರಿಸುತ್ತದೆ,
ಮಂತ್ರಂ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಸಜ್ಜನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್ನಲ್ಲಿ ಅಚ್ಯುತ್ ಕುಮಾರ್ ಮೂರು ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಗೆಟಪ್ನಲ್ಲಿ ಲವರ್ ಬಾಯ್ ಆಗಿ ಅವರು ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದಲ್ಲಿ ಅಚ್ಯುತ್ ಕುಮಾರ್ ಶಂಕ್ರಣ್ಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ದತ್ತಣ್ಣ, ಸುಜಯ್ ಶಾಸ್ತ್ರಿ, ಭಾಸ್ಕರ್ ನೀನಾಸಂ, ಡಾ.ಜಾನ್ವಿ ಜ್ಯೋತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ತಂದೆ ಮಕ್ಕಳ ಬಾಂಧವ್ಯದ ಕಥೆಯನ್ನೊಳಗೊಂಡ ಸಿನಿಮಾವಾಗಿದ್ದು, ಅದರ ಒಂದು ಝಲಕ್ ಟೀಸರ್ನಲ್ಲಿ ಕಾಣಿಸುತ್ತದೆ.
ಟಿ.ವಿಶ್ವನಾಥ್ ನಾಯ್ಕ್ ಎಸ್.ವಿ.ಪಿಚ್ಚರ್ಸ್ ಬ್ಯಾನರ್ನಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಚಿತ್ರಕ್ಕೆ ಆನಂದ್ ರಾಜಾವಿಕ್ರಮ ಸಂಗೀತ ನೀಡಿದ್ದಾರೆ. ಈ ವರ್ಷದಲ್ಲೇ ಚಿತ್ರವು ತೆರೆಗೆ ಬರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.