ಕುಡಿದು, ಕಿರುತೆರೆ ಕಲಾವಿದರ ರಂಪಾಟ: 'ಗಟ್ಟಿಮೇಳ' ರಕ್ಷಿತ್ ಸೇರಿ 7 ಮಂದಿ ವಿರುದ್ಧ ಎಫ್ ಐ ಆರ್
ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
Published: 29th January 2022 11:45 AM | Last Updated: 29th January 2022 01:14 PM | A+A A-

ರಕ್ಷಿತ್
ಬೆಂಗಳೂರು: ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕೆಂಗೇರಿ ಬಳಿ ಇರುವ ಜಿಂಜರ್ ಲೇಕ್ ವ್ಯೂ ಹೋಟೆಲ್ಗೆ ನಟ ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ, ಸೇರಿದಂತೆ 7 ಜನ ಊಟ ಮಾಡುವುದಕ್ಕೆ ಬಂದಿದ್ದರು. ಈ ವೇಳೆ ಮದ್ಯ ಸೇವಿಸಿ ರಕ್ಷಿತ್ ಅಂಡ್ ಗ್ಯಾಂಗ್ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರ ಜೊತೆಗೆ ರಕ್ಷಿತ್ ಆಂಡ್ ಗ್ಯಾಂಗ್ ಊಟ ಮಾಡುವುದಕ್ಕೆ ಬಂದಿದ್ದೆವು ಲೇಟ್ ಆಯಿತು ಎಂದು ಮಾತಿನ ಚಕಮಕಿ ನಡೆಸಿದ್ದಾರೆ.
7 ಜನರನ್ನು ಠಾಣೆಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಲ್ಕೋಹಾಲ್ ಸೇವನೆ ಮಾಡಿರುವುದು ಪತ್ತೆ ಆಗಿದೆ. ಎನ್ಡಿಎಂಎ ಮತ್ತು ನೈಟ್ ಕರ್ಫ್ಯೂ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸ್ಟೇಷನ್ ಬೇಲ್ ನೀಡಿ ಇವರನ್ನು ಬಿಡುಡಗೆ ಮಾಡಲಾಗಿದೆ. ಕೆಂಗೇರಿ ಪೊಲೀಸರು ಎನ್ ಡಿಎಂ ಎ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಿಕೊಂಡು ರಕ್ಷಿತ್, ರಂಜನ್, ಅನುಷಾ, ಅಭಿಷೇಕ್, ಶರಣ್ಯ ಸೇರಿದಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.