ಸುದೀಪ್ ಸ್ಟಾರರ್ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ಮುಂದೂಡಿಕೆ
ವಿಕ್ರಾಂತ್ ರೋಣ ಸಿನಿಮಾ ಫೆ.24ರಂದು ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿರುವುದಾಗಿ ಚಿತ್ರತಂಡ ಹೇಳಿದೆ.
Published: 29th January 2022 11:08 AM | Last Updated: 29th January 2022 01:13 PM | A+A A-

ವಿಕ್ರಾಂತ್ ರೋಣದಲ್ಲಿ ಕಿಚ್ಚ ಸುದೀಪ್
ಕನ್ನಡ ಚಿತ್ರಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದ ಸುದೀಪ್ ಅಭಿನಯದ, ಅನುಪ್ ಭಂಡಾರಿ ನಿರ್ದೇಶನದ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆ
ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಫೆ.24ರಂದು ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಸಿನಿಮಾ ದಿನಾಂಕ ಮತ್ತೆ ಮುಂದೂಡಲಾಗಿರುವುದಾಗಿ ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ಅಪ್ಪು ಮೆಚ್ಚಿದ ಹಾಡೇ ಸಾಂತ್ವನ: 'ಮೆ ಶಾಯರ್ ತೊ ನಹಿ' ಮ್ಯೂಸಿಕ್ ವಿಡಿಯೋದಲ್ಲಿ ಅಪ್ಪು ಅಭಿಮಾನಿಗಳ ಅಶ್ರುತರ್ಪಣ
ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಬೇಕೆಂದು ಚಿತ್ರತಂಡ ಉದ್ದೇಶಿಸಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಕೊರೊನಾ ಮಾರ್ಗಸೂಚಿ ಜಾರಿಯಲ್ಲಿರುವುದರಿಂದ ಗ್ರ್ಯಾಂಡ್ ರಿಲೀಸ್ ಗೆ ತೊಡಕಾಗುವುದೆಂದು ಚಿತ್ರತಂಡ ಬಿಡುಗಡೆಯನ್ನು ಮುಂದೂಡಿದೆ. ಇದೇ ವೇಳೆ ಸಿನಿಮಾದ 3ಡಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ.
ಇದನ್ನೂ ಓದಿ: 'ಫೋರ್ ವಾಲ್ಸ್ ಅಂಡ್ ಟೂ ನೈಟೀಸ್' ಮೂಲಕ ನಾಯಕನಾಗುತ್ತಿದ್ದಾರೆ ಅಚ್ಯುತ ಕುಮಾರ್