ಕ್ಲೈಮ್ಯಾಕ್ಸ್ ಇಷ್ಟ ಆಯ್ತು, ಹಾಗಾಗಿ 'ಬೆಂಕಿ' ತಂಡ ಸೇರಿಕೊಂಡೆ: ನಟ ಅನೀಶ್

ಪೊಲೀಸ್ ಕ್ವಾರ್ಟಸ್, ನಮ್ ಏರಿಯಾಲ್ ಒಂದು ದಿನ, ಅಕಿರಾ ಮತ್ತು ರಾಮಾರ್ಜುನ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ನಟ ಅನೀಶ್, ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ಪ್ರಕಾರದ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದಾಗಲೇ, ಅವರ ಮುಂದಿನ ಸಿನಿಮಾ ಬೆಂಕಿ, ಅವರನ್ನು ಆ ಹಾದಿಯಲ್ಲಿ ಕರೆದೊಯ್ಯುತ್ತಿದೆ.
ನಟ ಅನ್ನೀಸ್

ವಿಶಿಷ್ಠವಾದ ಪ್ರೀತಿ ಆಧಾರಿತ ವಿಷಯಗಳ ಸಿನಿಮಾಗಳಿಂದ ಬ್ರೇಕ್ ಪಡೆಯಲು ಬಯಸುತ್ತಿದ್ದ ಅನೀಶ್, ಅಣ್ಣ- ತಂಗಿಯ ಬಾಂಧವ್ಯದ ಸೆಂಟಿಮೆಂಟ್ ಗಾಗಿ ಬೆಂಕಿ ಸಿನಿಮಾ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಕಿ ನಟನಾಗಿ ನನಗೆ ಬದಲಾವಣೆ ತರಲಿದೆ. ಅಣ್ಣ- ತಂಗಿ ಸಂಬಂಧದ ಹೊರತಾಗಿ, ಸುಂದರವಾದ ರೋಮ್ಯಾಂಟಿಕ್ ಟ್ರ್ಯಾಕ್ ಒಂದನ್ನು ಹೊಂದಿದೆ. ಹಳ್ಳಿಯೊಂದರಲ್ಲಿ ಸಿನಿಮಾ ಸೆಟ್ ನಲ್ಲಿ ಇದೇ ಮೊದಲ ಬಾರಿಗೆ ನಟಿಸಿದ್ದೇನೆ ಎಂದು ಹೇಳಿದರು. 

ಖ್ಯಾತ ನಿರ್ದೇಶಕ ಎಆರ್ ಬಾಬು ಅವರ ಪುತ್ರ ಎಆರ್ ಶಾನ್, ಬೆಂಕಿಗೆ ಮೂಲಕ ಚೊಚ್ಚಲ ಚಿತ್ರ ನಿರ್ದೇಶಿಸಿದ್ದಾರೆ. 'ಬೆಂಕಿ' ಕಥೆಯ ಕ್ಲೈಮ್ಯಾಕ್ಸ್‌ ಇಷ್ಟ ಆಯ್ತು. ಹಾಗಾಗೀ ನಾನು ಬೆಂಕಿ ತಂಡ ಸೇರಿಕೊಂಡೆ. ಕೊನೆಯ 40 ನಿಮಿಷಗಳು ತೀವ್ರ ಸಾಹಸಗಳ ಸೀಕ್ವೆನ್ಸ್ ಗಳಿಂದ ತುಂಬಿವೆ. ಇದು ಕೂಡಾ ಕಮರ್ಷಿಯಲ್ ಎಂಟರ್ ಟೈನರ್ ಹೈಲೆಟ್ ಎಂದು ಅವರು ವಿವರಿಸಿದರು. 

ರಾಜ್ಯದ ವಿವಿಧ ಕಡೆಗಳಲ್ಲಿ ಬೆಂಕಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಶೃತಿ ಪಾಟೀಲ್ ಸಹೋದರಿ ಪಾತ್ರದಲ್ಲಿ ನಟಿಸಿದ್ದು, ಸಂಪದಾ ಹುಲಿವಾನ ಅನೀಶ್ ಪ್ರಿಯತಮೆಯಾಗಿ ಕಾಣಿಸಿಕೊಂಡಿದ್ದಾರೆ. ತೂತು ಮಡಿಕೆ ನಿರ್ದೇಶಕ ಹಾಗೂ ಹಿರೋ ಚಂದ್ರ ಕೀರ್ತಿ ಬೆಂಕಿಯಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಅನೀಶ್ ಅವರ ವಿಂಕ್‌ವಿಸ್ಲ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾದ ಬೆಂಕಿಗೆ ಆನಂದ್ ರಾಜ ವಿಕ್ರಮ್ ಸಂಗೀತ ನೀಡಿದ್ದು, ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com