ಜೂನ್ 3ರಿಂದ ಪ್ರೈಂ ವಿಡಿಯೋನಲ್ಲಿ ಕೆ.ಜಿ.ಎಫ್ ಚಾಪ್ಟರ್–2
ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆ.ಜಿ.ಎಫ್ ಚಾಪ್ಟರ್–2, ಜೂನ್ 3ರಿಂದ ಒಟಿಟಿ ವೇದಿಕೆ ಪ್ರೈಂ ವಿಡಿಯೋನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ.
Published: 01st June 2022 11:29 AM | Last Updated: 01st June 2022 01:05 PM | A+A A-

ಕೆಜಿಎಫ್-2 ಸ್ಟಿಲ್
ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿದ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕೆ.ಜಿ.ಎಫ್ ಚಾಪ್ಟರ್–2, ಜೂನ್ 3ರಿಂದ ಒಟಿಟಿ ವೇದಿಕೆ ಪ್ರೈಂ ವಿಡಿಯೋನಲ್ಲಿ ಉಚಿತವಾಗಿ ವೀಕ್ಷಣೆಗೆ ಲಭ್ಯವಾಗಲಿದೆ.
ಕೆಲವು ದಿನಗಳ ಹಿಂದೆಯೇ ಸಿನಿಮಾ ಪ್ರೈಂ ವಿಡಿಯೋನಲ್ಲಿ ಬಿಡುಗಡೆಯಾಗಿತ್ತು. ಆದರೆ, ಪ್ರೈಂ ಚಂದಾದಾರರಾಗಿದ್ದರೂ ಈ ಸಿನಿಮಾ ವೀಕ್ಷಿಸಲು ಹಣ ಪಾವತಿಸಬೇಕಿತ್ತು. ಜೂನ್ 3ರಿಂದ ಚಂದಾದಾರರು ಉಚಿತವಾಗಿ ಈ ಸಿನಿಮಾ ನೋಡಬಹುದು.
ಯಶ್ ನಾಯಕನಾಗಿ ನಟಿಸಿದ ಚಿತ್ರವು ಪ್ರಪಂಚದಾದ್ಯಂತ 1000 ಕೋಟಿಗೂ ಹೆಚ್ಚು ಹಣ ಗಳಿಸಿದೆ ಹಾಗೂ ಭಾರತದಾದ್ಯಂತ ಅನೇಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯಿತು. ಕೆಜಿಎಫ್ 2, ಏಪ್ರಿಲ್ 14 ರಂದು ಬಿಡುಗಡೆಯಾಯಿತು.
ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಪ್ರಕಾಶ್ ರಾಜ್ ನಟಿಸಿರುವ ಈ ಚಿತ್ರಕ್ಕೆ ಭುವನ್ ಗೌಡ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರ್ ಅವರ ಸಂಗೀತವಿದೆ.
Join Rocky on his journey to rule the world!! #KGF2onPrime, streaming from June 3 pic.twitter.com/m2dAaqxomE
— amazon prime video IN (@PrimeVideoIN) May 31, 2022