ನವರಸ ನಾಯಕ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್!
ನವರಸ ನಾಯಕ ಜಗ್ಗೇಶ್ ಗೆ ಜೀವನದಲ್ಲಿ ಖುಷಿಯ ಮೇಲೆ ಖುಷಿ ಸಿಗುತ್ತಿದೆ. ಈಗಾಗಲೇ ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಜೀವನದಲ್ಲಿ ಉತ್ತುಂಗಮಟ್ಟಕ್ಕೆ ಏರುತ್ತಿದ್ದಾರೆ.
Published: 01st June 2022 04:11 PM | Last Updated: 01st June 2022 04:11 PM | A+A A-

ಜಗ್ಗೇಶ್
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಗೆ ಜೀವನದಲ್ಲಿ ಖುಷಿಯ ಮೇಲೆ ಖುಷಿ ಸಿಗುತ್ತಿದೆ. ಈಗಾಗಲೇ ರಾಜ್ಯ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ರಾಜಕೀಯ ಜೀವನದಲ್ಲಿ ಉತ್ತುಂಗಮಟ್ಟಕ್ಕೆ ಏರುತ್ತಿದ್ದಾರೆ.
ಇನ್ನು ನಟನಾ ವೃತ್ತಿಯಲ್ಲೂ ಸೈ ಎನಿಸಿಕೊಂಡಿರುವ ಜಗ್ಗೇಶ್ ಅವರ ತೋತಾಪುರಿ ಸಿನಿಮಾ ಇದೇ ಜೂನ್ 10 ರಂದು ತೆರೆ ಕಾಣುತ್ತಿದೆ. ಇದೀಗ ಅವರ ಅಭಿನಯದ ಮತ್ತೊಂದು ಸಿನಿಮಾ ರಾಘವೇಂದ್ರ ಸ್ಟೋರ್ಸ್ ಮೂಲಕ ರಸದೌತಣ ಉಣಬಡಿಸಲು ಬರುತ್ತಿದ್ದಾರೆ.
ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸಿರುವ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ವೇದಿಕೆ ಕೂ ನಲ್ಲಿ ಘೋಷಣೆ ಮಾಡಿದೆ.
ಸಾಲು ಸಾಲು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿರುವ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್ 2 ನಂತರ ನಟ ಜಗ್ಗೆಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ತಯಾರಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದು, ಆಗಸ್ಟ್ 5 ರಂದು ಈ ಸಿನಿಮಾ ತೆರೆ ಕಾಣಲಿದೆ ಎಂದು ಹೇಳಿದ್ದಾರೆ.
ವರಮಹಾಲಕ್ಷ್ಮಿಗೆ ನವರಸಗಳ ರಸದೌತಣ ಸವಿಯಲು ಸಿದ್ಧರಾಗಿ, ಇದೇ ಆಗಸ್ಟ್ 05, 2022ರಿಂದ! Get ready for a delicious meal coming your way from Aug 5th, 2022.#RaghavendraStores #RaghavendraStoresOnAug5 ಎಂದು ಹೊಂಬಾಳೆ ಫಿಲ್ಮ್ಸ್ ಕೂ ಮಾಡುವ ಮೂಲಕ ಸಿನಿಮಾ ಬಿಡುಗಡೆಯಾಗಿದೆ ಎಂದು ಘೋಷಿಸಲಾಗಿದೆ.