ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆಯತ್ತ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ರಾ ರಾ ರಕ್ಕಮ್ಮ ಸಾಂಗ್!
ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆ ಪಡೆಯಲಿದೆ.
Published: 02nd June 2022 01:05 PM | Last Updated: 02nd June 2022 01:14 PM | A+A A-

ವಿಕ್ರಾಂತ್ ರೋಣ ಸಿನಿಮಾ ಸ್ಟಿಲ್
ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆ ಪಡೆಯಲಿದೆ.
ಮೇ 23 ರಂದು ರಿಲೀಸ್ ಆಗಿದ್ದ ಈ ಸಾಂಗ್ ಸದ್ಯಕ್ಕೆ ಆನ್ ಲೈನ್ ನಲ್ಲಿ ಟ್ರೆಂಡ್ ಮೂಡಿಸಿದೆ. ಆಶಿಕಾ ರಂಗನಾಥ್, ವೈಷ್ಣವಿ, ಅರುಣ್ ಸಾಗರ್, ಚಂದನ್ ಶೆಟ್ಟಿ, ಮಂಜು ಪಾವಗಡ, ಮತ್ತು ನಿಶ್ವಿಕಾ ಸೇರಿದಂತೆ ಹಲವರು ಈ ಹಾಡಿಗೆ ಸ್ಟೆಪ್ ಹಾಕಿದ್ದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ.
ನಿರ್ದೇಶಕ ಅನುಪ್ ಭಂಡಾರಿ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಬಿಡುಗಡೆಯಾದ ಒಂದೇ ದಿನದಲ್ಲಿ 2.5 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಹಾಡು ಸಾಮಾಜಿಕ ಮಾಧ್ಯಮದಲ್ಲಿ 35 ಮಿಲಿಯನ್ ವೀಕ್ಷಣೆಗಳ ಗಳಿಸಿದೆ.
ರಾ ರಾ ರಕ್ಕಮ್ಮ 5 ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈ ವಾರ ಇದು 50 ಮಿಲಿಯನ್ ವೀಕ್ಷಣೆಗಳನ್ನು ಮುಟ್ಟುವ ನಿರೀಕ್ಷೆಯಿದೆ. ಅಲಂಕಾರ ಪಾಂಡಿಯನ್ ಸಹಯೋಗದಲ್ಲಿ ಮಂಜುನಾಥ್ ಗೌಡ ನಿರ್ಮಿಸಿರುವ ವಿಕ್ರಾಂತ್ ರೋಣ ಕೂಡ 3ಡಿಯಲ್ಲಿ ಬಿಡುಗಡೆಯಾಗಲಿದೆ.