ಕಾಲೇಜು ದಿನಗಳ ಅನುಭವ ಗಜಾನನ ಅಂಡ್ ಗ್ಯಾಂಗ್ ಕಥೆ ಬರೆಯಲು ಸ್ಪೂರ್ತಿ ನೀಡಿತು: ಅಭಿಷೇಕ್ ಶೆಟ್ಟಿ
ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಕಾಲೇಜು ಸ್ಟೋರಿಗಳು ಬಂದಿವೆ. ಈ ಪೈಕಿ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಕೂಡ. ಅದೇ ರೀತಿಯಾಗಿ ಇದೀಗ 'ಗಜಾನನ & ಗ್ಯಾಂಗ್' ರಿಲೀಸ್ಗೆ ರೆಡಿಯಾಗಿದ್ದು, ಹೊಸ ಟೀಂ ಜೊತೆಗೆ ಕೆಲವು ಅನುಭವಿ ಸ್ಟಾರ್ಗಳು ಸಾಥ್ ಕೊಟ್ಟಿದ್ದಾರೆ.
Published: 02nd June 2022 01:57 PM | Last Updated: 02nd June 2022 02:26 PM | A+A A-

ಅಭಿಷೇಕ್ ಶೆಟ್ಟಿ
ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಕಾಲೇಜು ಸ್ಟೋರಿಗಳು ಬಂದಿವೆ. ಈ ಪೈಕಿ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಕೂಡ. ಅದೇ ರೀತಿಯಾಗಿ ಇದೀಗ 'ಗಜಾನನ & ಗ್ಯಾಂಗ್' ರಿಲೀಸ್ಗೆ ರೆಡಿಯಾಗಿದ್ದು, ಹೊಸ ಟೀಂ ಜೊತೆಗೆ ಕೆಲವು ಅನುಭವಿ ಸ್ಟಾರ್ಗಳು ಸಾಥ್ ಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗರಿಗೆ ಮನರಂಜನೆ ರಸದೌತಣ ಬಡಿಸಲು 'ಗಜಾನನ & ಗ್ಯಾಂಗ್' ಟೀಂ ಸಜ್ಜಾಗಿದೆ.
ನಟ ಶ್ರೀಮಹದೇವ್ ಹಾಗೂ ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ 'ಗಜಾನನ & ಗ್ಯಾಂಗ್' ಜೂನ್ 3 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್ ಮತ್ತು ಹಾಡುಗಳಿಂದ ಒಂದಷ್ಟು ಗಮನ ಸೆಳೆದಿರುವ 'ಗಜಾನನ & ಗ್ಯಾಂಗ್' ಬೆಳ್ಳಿತೆರೆ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ.
ಗಜಾನನ & ಗ್ಯಾಂಗ್' ಈ ಚಿತ್ರದ ಟೈಟಲ್ ಹೇಳುವಂತೆ ಇದು ಒಂದು ಹುಡುಗರ ಗ್ಯಾಂಗ್ ಅದರಲ್ಲೂ ಕಾಲೇಜು ಆಧರಿತ ಚಿತ್ರವಾಗಿದ್ದು, ಕಾಮಿಡಿ, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಇದು ಎನ್ನಬಹುದು. ನಮ್ ಗಣಿ ಬಿಕಾಂ ಪಾಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ನಿರ್ದೇಶಕ, ನಟ ಅಭಿಷೇಕ್ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಸಹ ನಟಿಸಿದ್ದಾರೆ.
ಇದನ್ನೂ ಓದಿ: 'ಗಜಾನನ ಅಂಡ್ ಗ್ಯಾಂಗ್' ಬಿಡುಗಡೆ ಫಿಕ್ಸ್: 300 ಥಿಯೇಟರ್ ಗಳಲ್ಲಿ ಅದಿತಿ- ಶ್ರೀ ಜೋಡಿ ಮ್ಯಾಜಿಕ್
ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ನಿರ್ದೇಶಕ ಅಭಿಷೇಕ್ ಶೆಟ್ಟಿ, ಹೊಸಬರ ಸಿನಿಮಾಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದು ಎರಡು ವರ್ಷದ ಜರ್ನಿಯಾಗಿದು, 'ಗಜಾನನ & ಗ್ಯಾಂಗ್' ಸಿನಿಮಾದಲ್ಲಿ ಹೊಸತನದ ಹಂಬಲವಿದೆ. ಸಿನಿಮಾಗಳನ್ನು ಮಾಡುತ್ತಿರುವವರು ನಮ್ಮಂತವರು. ಶೇ.20ರಷ್ಟು ಸ್ಟಾರ್ ಸಿನಿಮಾಗಳು ಆಗ್ತಿವೆ. ಶೇ.80 ಪ್ರೋತ್ಸಾಹ ಕೊಟ್ರೆ 20 ಮುಂದೆ 40 ಆಗುತ್ತೆ ಎಂದರು.
ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಒಂದು ಅದ್ಭುತವಾದ ಸಿನಿಮಾ ಹಾಗೂ 2 ವರ್ಷಗಳ ಅನುಭವ ವಿಭಿನ್ನ. ಅಲ್ಲದೇ , ಕನ್ನಡದಲ್ಲಿ ಕಾಲೇಜ್ ಗ್ಯಾಂಗ್ ಸ್ಟೋರಿ ಆಧಾರಿತ ಚಿತ್ರ ಬಂದು ಬಹಳ ದಿನಗಳೇ ಆಗಿದೆ. ಈ ಕೊರತೆಯನ್ನು ನಮ್ಮ ಸಿನಿಮಾ ನೀಗಿಸಲಿದೆ. ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರತಿಯೊಬ್ಬರು ಸಿನಿಮಾ ನೋಡಿ, ದಯವಿಟ್ಟು ಸಪೋರ್ಟ್ ಮಾಡಿ ಎಂದಿದ್ದಾರೆ.
ಪ್ರದ್ಯುತನ್ ಸಂಗೀತ, ಉದಯ ಲೀಲಾ ಕ್ಯಾಮೆರಾ ಚಿತ್ರಕ್ಕಿದೆ. ಬಿಗ್ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಅಲಿಯಾಸ್ ಬ್ರೋ ಗೌಡ ಚಿತ್ರದಲ್ಲಿ ನಟಿಸಿದ್ದಾರೆ.