ಬಡಿದೆಬ್ಬಿಸುವಿರಾ….ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪೇಂದ್ರ!
ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಬಹಳ ವರ್ಷಗಳ ನಂತರ ಉಪೇಂದ್ರ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಂತೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
Published: 02nd June 2022 05:29 PM | Last Updated: 02nd June 2022 06:36 PM | A+A A-

ಉಪೇಂದ್ರ ಟ್ವೀಟ್ ಮಾಡಿರುವ ಫೋಸ್ಟರ್
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ನಿರ್ದೇಶನಕ್ಕೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಚಿತ್ರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ಬಹಳ ವರ್ಷಗಳ ನಂತರ ಉಪೇಂದ್ರ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದರಿಂದ ಅಭಿಮಾನಿಗಳಂತೂ ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.
ಆಗಾಗ್ಗೆ ವಿಭಿನ್ನ ಫೋಸ್ಟರ್ ಬಿಡುಗಡೆ ಮೂಲಕ ಚಿತ್ರದ ಆಪ್ ಡೇಟ್ ನೀಡುವ ಉಪೇಂದ್ರ, ಇಂದು ಫೋಸ್ಟರ್ ವೊಂದನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಬಿಡಿದ್ದೆಬಿಸುವಿರಾ... ಎಂದು ಶೀರ್ಷಿಕೆಯಡಿ ಫೋಸ್ಟರ್ ಹಂಚಿಕೊಳ್ಳುವ ಮೂಲಕ ಉಪೇಂದ್ರ ಅಭಿಮಾನಿಗಳ ತಲೆಗೆ ಮತ್ತೆ ಹುಳಬಿಟ್ಟಿದ್ದಾರೆ.
ಬಡಿದೆಬ್ಬಿಸುವಿರಾ…..#ಸಿನಾಮ #uithemovie pic.twitter.com/4HP3c4FBlg
— Upendra (@nimmaupendra) June 2, 2022
ಕುದುರೆಯಾಕಾರದ ಮೂರು ಕಣ್ಣುಗಳಿರುವ ಫೋಸ್ಟರ್ ನಲ್ಲಿ 'ಬುದ್ಧಿಯ ಬಿರುಗಾಳಿ' ಎಂಬ ಶೀರ್ಷಿಕೆಯಿದೆ. ಚಿತ್ರ ವಿಚಿತ್ರದ ಈ ಫೋಸ್ಟರ್ ಗೆ ಅಭಿಮಾನಿಗಳು ಪಿಧಾ ಆಗಿದ್ದು, ಮತ್ತಷ್ಟು ಚಿತ್ರಗಳನ್ನು ಉಪೇಂದ್ರ ನಿರ್ದೇಶನ ಮಾಡಲಿ ಎಂದು ಹೇಳುತ್ತಿದ್ದಾರೆ.
ಉಪೇಂದ್ರ ಅವರ ಮುಂದಿನ ಚಿತ್ರವನ್ನು ಜಿ. ಮನೋಹರನ್, ಕೆ.ಪಿ. ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದು, ನವೀನ್ ಮನೋಹರನ್ ಸಹ ನಿರ್ಮಾಪಕರಾಗಿದ್ದಾರೆ.