
ಒಟಿಟಿಯಲ್ಲಿ ಈ ವಾರ 6 ಚಿತ್ರಗಳು ತೆರೆಗೆ!!
ಬೆಂಗಳೂರು: ಈ ಹಿಂದಿನ ಶುಕ್ರವಾರದಂತೆಯೇ ಈ ವಾರವೂ ಕೂಡ ಹಲವು ಕನ್ನಡ ಚಿತ್ರಗಳು ತೆರೆಕಾಣುತ್ತಿದ್ದು, ಈ ಬಾರಿ 6 ಚಿತ್ರಗಳು ಒಟಿಟಿಯಲ್ಲಿ ತೆರೆಗೆ ಅಪ್ಪಳಿಸಿವೆ.
ಹೌದು.. ಜೂನ್ ಮೊದಲ ವಾರದಲ್ಲಿಯೇ ಈ ಬಾರಿ ಓಟಿಟಿ ಅಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಅಲ್ಲದೆ ವೆಬ್ ಸಿರೀಸ್ಗಳೂ ಕೂಡ ರಿಲೀಸ್ ಆಗುತ್ತಿದೆ. ಈ ಹಿಂದೆ 'ಕೆಜಿಎಫ್ 2' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪೇ ಪರ್ ವ್ಯೂ ಆಧಾರದಲ್ಲಿ ರಿಲೀಸ್ ಆಗಿತ್ತು. ಈಗ ಹಣ ಕೊಟ್ಟು ಸಿನಿಮಾ ವೀಕ್ಷಿಸುವ ಹಂತ ಮುಗಿದಿದ್ದು ಎಲ್ಲರೂ ಫ್ರೀಯಾಗಿ ನೋಡಬಹುದಾಗಿದೆ. 'ಕೆಜಿಎಫ್ 2' ಜೂನ್ 3 ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ.
ಅಂತೆಯೇ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಟನೆಯ ಮಲೆಯಾಳಂ ಚಿತ್ರವಾದ ‘ಜನ ಗಣ ಮನ‘ ಚಿತ್ರವು ಈ ವಾರ ಓಟಿಟಿ ಅಲ್ಲಿ ರಿಲೀಸ್ ಆಗುತ್ತಿದ್ದು, ನೆಟ್ಫ್ಲಿಕ್ಸ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ತೆಲುಗಿನ 'ಅಶೋಕ ವನಮ್ ಲೋ ಅರ್ಜುನ ಕಲ್ಯಾಣಂ' ಸಿನಿಮಾ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಹೀಗಾಗಿ ಚಿತ್ರ ನಿರ್ಮಾಪಕರು ಬಹುಬೇಗ ಓಟಿಟಿಗೆ ತಂದಿದ್ದಾರೆ.
ಇನ್ನು ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ್ದ 'ಆಶ್ರಮ್ ಸೀಸನ್ 3' ವೆಬ್ ಸಿರೀಸ್ ಇದೀಗ ಓಟಿಟಿ ಅಲ್ಲಿ ಬಿಡುಗಡೆ ಆಗುತ್ತಿದೆ. ಬಾಬಿ ಡಿಯೊಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೂನ್ 3ರಂದು MX ಪ್ಲೇಯರ್ ನಲ್ಲಿ ಸಿರೀಸ್ ರಿಲೀಸ್ ಆಗಿದೆ. ಅಂತೆಯೇ ತೆಲುಗಿನ '9 Hours' ಈ ವೆಬ್ ಸಿರೀಸ್ ಈ ವಾರ ರಿಲೀಸ್ ಆಗುತ್ತಿದೆ. ಈ ಸೀರಿಸ್ ಅನ್ನು ಜೇಕಬ್ ವರ್ಗೀಸ್ ಹಾಗೂ ನಿರಂಜನ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ. ಇದೊಂದು ಸಸ್ಪೇನ್ಸ್ ಥ್ರಿಲ್ಲರ್ ಸಿರೀಸ್ ಆಗಿದೆ.
ಡಿಸ್ನಿ+ ಹಾಟ್ಸ್ಟಾರ್ ನಲ್ಲಿ ಈ ವಾರ ಹಿಂದಿಯ ಆಶಿಕಾನಾ ಎಂಬ ವೆಬ್ ಸಿರೀಸ್ ಬಿಡುಗಡೆ ಆಗಿದ್ದು, ಜೂನ್ 6ರಂದುರಿಲೀಸ್ ಆಗುತ್ತಿದ್ದು, ಇದೊಂದು ಪಕ್ಕಾ ಸಸ್ಪೆನ್ಸ್, ಥ್ರಿಲ್ಲರ್ ಲವ್ ಸ್ಟೋರಿ ಹೊಂದಿರುವ ವೆಬ್ ಸೀರಿಸ್ ಆಗಿದೆ. ಒಟ್ಟಿನಲ್ಲಿ ಈ ವಾರ ಸಾಲು ಸಾಲು ಸಿನಿಮಾ ಮತ್ತು ಸಿರೀಸ್ ಗಳು ಬಿಡುಗಡೆ ಆಗುತ್ತಿದ್ದು, ಸಿನಿ ಪ್ರೇಮಿಗಳಿಗೆ ಹಬ್ಬವಾಗಿದೆ.