ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಬಿಡುಗಡೆಗೆ ದಿನಾಂಕ್ ಫಿಕ್ಸ್!
ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ 'ವಿಂಡೋ ಸೀಟ್' ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಜುಲೈ 1 ರಂದು ಚಿತ್ರ ಬಿಡುಗಡೆ ಮಾಡಲು ನಿರ್ದೇಶಕರು ಸಜ್ಜಾಗುತ್ತಿದ್ದಾರೆ.
Published: 07th June 2022 10:26 AM | Last Updated: 07th June 2022 01:49 PM | A+A A-

ವಿಂಡೋ ಸೀಟ್ ಸಿನಿಮಾ ಸ್ಟಿಲ್
ಶೀತಲ್ ಶೆಟ್ಟಿ ಚೊಚ್ಚಲ ನಿರ್ದೇಶನದ 'ವಿಂಡೋ ಸೀಟ್' ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.
ಜುಲೈ 1 ರಂದು ಚಿತ್ರ ಬಿಡುಗಡೆ ಮಾಡಲು ನಿರ್ದೇಶಕರು ಸಜ್ಜಾಗುತ್ತಿದ್ದಾರೆ. ಶಿವರಾಜಕುಮಾರ್ ನಟನೆಯ ಬೈರಾಗಿ ಮತ್ತು ಕೆ ಎಂ ಚೈತನ್ಯ ಅವರ ನಿರ್ದೇಶನದ ಅಬ್ಬಬ್ಬಾ ಸಿನಿಮಾಗಳು ಕೂಡ ಜುಲೈ 1 ರಂದೇ ರಿಲೀಸ್ ಆಗುತ್ತಿವೆ.
ವಿಂಡೋ ಸೀಟ್‌ನ ಬಿಡುಗಡೆ ದಿನಾಂಕದ ಅಧಿಕೃತ ಘೋಷಣೆಯನ್ನು ತಂಡವು ಟ್ರೈಲರ್ ರಿಲೀಸ್ ಜೊತೆಗೆ ತಿಳಿಸಿದೆ. ನಿರೂಪ್ ಭಂಡಾರಿ ಅಭಿನಯದ ಚಿತ್ರದ ವಿಂಡೋ ಸೀಟ್ ಚಿತ್ರವು ರೊಮ್ಯಾಂಟಿಕ್ ಕ್ರೈಮ್ ಕಥೆಯಾಗಿದೆ.
ವಿಕ್ರಾಂತ್ ರೋಣ ನಿರ್ಮಾಪಕ ಮಂಜುನಾಥ್ ಗೌಡ ಅವರ ಬೆಂಬಲದ ವಿಂಡೋ ಸೀಟ್, ಸಂಜನಾ ಆನಂದ್ ಮತ್ತು ಅಮೃತ ಅಯ್ಯಂಗಾರ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಅವರು ಸೂರಜ್ ಮತ್ತು ರಂಗಭೂಮಿ ಕಲಾವಿದೆ ಲೇಖಾ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ.