'ರಜನಿ' ಸರ್ ಮತ್ತು ನನ್ನನ್ನು ಒಟ್ಟಿಗೆ ಬೆಳ್ಳಿತೆರೆ ಮೇಲೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ: ಶಿವರಾಜಕುಮಾರ್
ಸೆಂಚುರಿ ಸ್ಟಾರ್ ಅವರು ರಜನಿಕಾಂತ್ ಅವರ ಚಲನಚಿತ್ರದ ಭಾಗವಾಗಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿದ್ದಾರೆ, ಸಿನಿಮಾಗೆ, ತಾತ್ಕಾಲಿಕವಾಗಿ ತಲೈವರ್ 169 ಎಂದು ಟೈಟಲ್ ಇಡಲಾಗಿದೆ.
Published: 08th June 2022 01:25 PM | Last Updated: 08th June 2022 01:52 PM | A+A A-

ಶಿವ ರಾಜಕುಮಾರ್ ಮತ್ತು ರಜನಿಕಾಂತ್
ನಿರ್ದೇಶಕ ನೆಲ್ಸನ್ ಜೊತೆಗಿನ ರಜನಿಕಾಂತ್ ಅವರ ಮುಂಬರುವ ಸಿನಿಮಾಗಾಗಿ ನಟ ಶಿವರಾಜಕುಮಾರ್ ಅವರನ್ನು ಸಂಪರ್ಕಿಸಲಾಗಿದೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಸದ್ಯ ಈ ಪ್ರಾಜೆಕ್ಟ್ ಕುರಿತು ಚರ್ಚಿಸಲು ನಿರ್ದೇಶಕ ನೆಲ್ಸನ್ ಬೆಂಗಳೂರಿನಲ್ಲಿ ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ಸೆಂಚುರಿ ಸ್ಟಾರ್ ಅವರು ರಜನಿಕಾಂತ್ ಅವರ ಚಲನಚಿತ್ರದ ಭಾಗವಾಗಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿದ್ದಾರೆ, ಸಿನಿಮಾಗೆ, ತಾತ್ಕಾಲಿಕವಾಗಿ ತಲೈವರ್ 169 ಎಂದು ಟೈಟಲ್ ಇಡಲಾಗಿದೆ. ಸ್ಕ್ರಿಪ್ಟ್ ಇಷ್ಟವಾಯಿತು ಮತ್ತು ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ ಎಂದು ಶಿವರಾಜಕುಮಾರ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಜೊತೆಗೆ ನಟಿಸಲು ಯಾರಿಗಾದರೂ ಅವಕಾಶ ಸಿಕ್ಕರೇ ಅದು ಅದೃಷ್ಟ, ಈ ಸಿನಿಮಾದಿಂದ ಇದು ಸಾಧ್ಯವಾಗಿದೆ. ಬಾಲ್ಯದಿಂದಲೂ ಅವರಿಗೆ ನನ್ನ ನನ್ನ ಬಗ್ಗೆ ತಿಳಿದಿದೆ. ನಾನು ಹಿರಿಯ ನಟರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದೇನೆ. ಈ ಚಿತ್ರದ ಭಾಗವಾಗಲು ನನಗೆ ಖುಷಿಯಾಗಿದೆ. ಬೆಳ್ಳಿತೆರೆಯಲ್ಲಿ ರಜನಿ ಸರ್ ಮತ್ತು ನನ್ನನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಶಿವಣ್ಣ ತಿಳಿಸಿದ್ದಾರೆ.
ಇದನ್ನೂ ಓದಿ: ನೆಲ್ಸನ್ ನಿರ್ದೇಶನದ ರಜನಿಕಾಂತ್ ನಟನೆಯ 'ತಲೈವರ್ 169' ಚಿತ್ರದಲ್ಲಿ ಶಿವರಾಜ್ ಕುಮಾರ್!
ಆಗಸ್ಟ್ ನಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಯೋಜಿಸುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ ರಜನಿ ಸರ್ ಮತ್ತು ನನ್ನ ಪಾತ್ರದ ಶೂಟಿಂಗ್ ಮೈಸೂರು ಅಥವಾ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಶಿವರಾಜಕುಮಾರ್ ತಿಳಿಸಿದ್ದಾರೆ.
ಸದ್ಯ ಶಿವರಾಜಕುಮಾರ್ 125 ನೇ ಚಿತ್ರ ವೇದಾ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಜೂನ್ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.
ಚಿತ್ರಗಳ ಹೊರತಾಗಿ, ಶಿವಣ್ಣ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ನಾನು ನೃತ್ಯವನ್ನು ಇಷ್ಟಪಡುತ್ತೇನೆ, ಮತ್ತು ಯುವ ಮತ್ತು ಪ್ರತಿಭಾವಂತ ನೃತ್ಯಗಾರರು ನನ್ನ ಹಾಡುಗಳಿಗೆ ಡ್ಯಾನ್ಸ್ ಮಾಡುವುದನ್ನು ನೋಡಿ ಖುಷಿಪಡುವುದಾಗಿ ಶಿವಣ್ಣ ತಿಳಿಸಿದ್ದಾರೆ.