ವಿಘ್ನೇಶ್ ಶಿವನ್ ಜೊತೆ ನಯನತಾರಾ ಸಪ್ತಪದಿ: ರಜನಿಕಾಂತ್, ಶಾರುಖ್ ಸೇರಿದಂತೆ ಹಲವು ಗಣ್ಯರು ಭಾಗಿ
ಕಾಲಿವುಡ್ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ.
Published: 09th June 2022 12:23 PM | Last Updated: 09th June 2022 12:23 PM | A+A A-

ನಯನಾತಾರಾ ವಿಘ್ನೇಶ್ ಶಿವನ್
ಚೆನ್ನೈ: ಕಾಲಿವುಡ್ನ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ನಯನತಾರಾ ತಮ್ಮ ಬಹುಕಾಲದ ಗೆಳೆಯ ಚಿತ್ರ ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ.
ಮಹಾಬಲಿಪುರಂ ಖಾಸಗಿ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಿತು ಎಂದು ತಮಿಳುನಾಡು ಮಾಧ್ಯಮಗಳು ವರದಿ ಮಾಡಿವೆ. ಮದುವೆ ಕಾರ್ಯಕ್ರಮಕ್ಕೆ ಸಿನಿಮಾರಂಗದ ಗಣ್ಯರಾದ ನಟ ರಜನಿಕಾಂತ್, ರಾಧಿಕಾ ಶರತ್ ಕುಮಾರ್, ವಸಂತ ರವಿ, ಬಾಲಿವುಡ್ ನಟ ಶಾರೂಖ್ ಖಾನ್ ಆಗಮಿಸಿ ವಧುವರರನ್ನು ಹರಸಿದ್ದಾರೆ.
ಈ ಮದುವೆಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಕುಟುಂಬದವರು, ಸಂಬಂಧಿಕರು, ಆಪ್ತರು, ಗೆಳೆಯರು ಕೂಡ ಭಾಗವಹಿಸಿದ್ದರು. ಈ ಹಿಂದೆ ವಿವಾಹ ತಿರುಪತಿಯಲ್ಲಿ ನಡೆಯಲಿದೆ ಎನ್ನಲಾಗಿತ್ತು. ಭದ್ರತೆಯ ಕಾರಣಗಳಿಂದಾಗಿ ತಮಿಳುನಾಡಿನಲ್ಲಿ ಮದುವೆ ನಡೆದಿದೆ ಎಂದು ವಿಘ್ನೇಶ್ ಶಿವನ್ ಗೆಳೆಯರು ಹೇಳಿದ್ದಾರೆ.
2015ರಲ್ಲಿ ವಿಘ್ನೇಶ್ ನಿರ್ದೇಶನದ ‘ನಾನುಂ ರೌಡಿಧಾನ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ನಡುವೆ ಪ್ರೇಮಾಂಕುರವಾಗಿತ್ತು. ಇದೀಗ ನಯನ ತಾರಾ ಮತ್ತು ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.