
ಕಮಲ ಹಾಸನ್ ಮತ್ತು ಸೂರ್ಯ
ಚೆನ್ನೈ: ಇತ್ತೀಚೆಗೆ ತೆರೆಕಂಡು ಉತ್ತಮ ಪ್ರಶಂಸೆಗಳಿಸುತ್ತಿರುವ ಕಮಲ್ ಹಾಸನ್ ಅಭಿನಯದ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಕೂಡ ದೊಡ್ಡ ಸದ್ದು ಮಾಡುತ್ತಿದೆ.
ಚಿತ್ರದ ಯಶಸ್ಸಿನ ಸಂತಸದಲ್ಲಿರುವ ಕಮಲ್ ಹಾಸನ್ ನಟ ಸೂರ್ಯ ಶಿವಕುಮಾರ್ ಅವರಿಗೂ ಕೂಡ ಕಮಲ್ ಹಾಸನ್ ಅವರು ತಮ್ಮ ಬಳಿ ಇದ್ದ ದುಬಾರಿ ವಾಚ್ ಉಡುಗೊರೆಯಾಗಿ ನೀಡಿದ್ದಾರೆ. 44 ಲಕ್ಷ ರೂಪಾಯಿ ಮೌಲ್ಯದ ರೊಲೆಕ್ಸ್ ವಾಚ್ ಅನ್ನು ಸೂರ್ಯ ಕಮಲ್ ಅವರಿಂದ ಪಡೆದಿದ್ದಾರೆ.
ವಿಕ್ರಮ್ ಸಿನಿಮಾದಲ್ಲಿ ಸೂರ್ಯ ಅವರು ಕೇವಲ 10 ನಿಮಿಷ ಕಾಣಿಸಿಕೊಂಡರೂ ಗಮನ ಸೆಳೆಯುವ ನಟನೆ ಮಾಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರ ಕೂಡ ಡ್ರಗ್ಸ್ ಮಾಫಿಯಾದ ಡಾನ್ ರೋಲೆಕ್ಸ್ ಎಂಬುದು ಕೂಡ ಇಲ್ಲಿ ಗಮನಾರ್ಹ.
ಇತ್ತೀಚೆಗೆ ಕಮಲ ಹಾಸನ್, ನಿರ್ದೇಶಕ ಲೋಕೇಶ್ ಕನಗರಾಜ್ ಅವರಿಗೆ ದುಬಾರಿ ಕಾರ್ ಉಡುಗೊರೆ ನೀಡಿದ ಬೆನ್ನಲ್ಲೇ ಚಿತ್ರತಂಡದ ಇತರರಿಗೂ ಕೂಡ ಕಮಲ್ ಅವರು ದುಬಾರಿ ಉಡುಗೊರೆ ನೀಡಿ ಗಮನ ಸೆಳೆಯುತ್ತಿದ್ದಾರೆ.
A moment like this makes life beautiful! Thank you Anna for your #Rolex! @ikamalhaasan pic.twitter.com/uAfAM8bVkM
— Suriya Sivakumar (@Suriya_offl) June 8, 2022