
ನಯನತಾರಾ-ವಿಘ್ನೇಶ್ ಶಿವನ್
ತಿರುಮಲ: ಜಸ್ಟ್ ಮ್ಯಾರೀಡ್ ದಂಪತಿ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ತಿರುಪತಿಯ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ.
ಗುರುವಾರ ಮಹಾಬಲಿಪುರಂನಲ್ಲಿ ನಡೆದ ವಿವಾಹದ ನಂತರ, ದಂಪತಿ ವೆಂಕಟೇಶ್ವರನ ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ತಿರುಪತಿಯ ಬೆಟ್ಟದ ದೇವಸ್ಥಾನಕ್ಕೆ ತೆರಳಿದ ಜೋಡಿ ತಿರುಪತಿ ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಂತರ್ಜಾಲದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ, ನಯನತಾರಾ ಅವರು ತಮ್ಮ ಪಾದರಕ್ಷೆಗಳೊಂದಿಗೆ ದೇಗುಲದ ಆವರಣದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.ತಿರುಮಲ ತಿರುಪತಿ ದೇವಸ್ತಾನಂ ಮಂಡಳಿಯ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್ ಪ್ರಕಾರ, ದೇವಾಲಯದ ಆವರಣದಲ್ಲಿ ಚಪ್ಪಲಿಯನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ವಿಘ್ನೇಶ್ ಶಿವನ್ ಜೊತೆ ನಯನತಾರಾ ಸಪ್ತಪದಿ: ರಜನಿಕಾಂತ್, ಶಾರುಖ್ ಸೇರಿದಂತೆ ಹಲವು ಗಣ್ಯರು ಭಾಗಿ
ನಯನತಾರಾ ಅವರು ಮಾದ ಬೀದಿಗಳಲ್ಲಿ ಪಾದರಕ್ಷೆಗಳೊಂದಿಗೆ ತಿರುಗಾಡುತ್ತಿರುವುದನ್ನು ನಮ್ಮ ಸೆಕ್ಯುರಿಟಿ ತಕ್ಷಣವೇ ನೋಡಿ ಪ್ರತಿಕ್ರಿಯಿಸಿದರು. ಅವರು ದೇವಾಲಯದ ಆವರಣದಲ್ಲಿ ಫೋಟೋ ಶೂಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಪವಿತ್ರ ದೇಗುಲದ ಒಳಗೆ ಖಾಸಗಿ ಕ್ಯಾಮೆರಾಗಳನ್ನು ಅನುಮತಿಸಲಾಗುವುದಿಲ್ಲ ಅವರು ಹೇಳಿದರು.
ಶೀಘ್ರದಲ್ಲೇ ನಟಿ ನಯನತಾರಾಗೆ ಲೀಗಲ್ ನೋಟಿಸ್ ನೀಡಲಿದ್ದೇವೆ ಎಂದು ತಿಳಿಸಿದ ಅವರು, ನಾವು ನಯನತಾರಾಗೆ ನೋಟಿಸ್ ನೀಡುತ್ತಿದ್ದೇವೆ. ಈಗಾಗಲೇ ನಾವು ಅವರೊಂದಿಗೂ ಮಾತನಾಡಿದ್ದೇವೆ. ಈ ವೇಳೆ ಅವರು ಲಾರ್ಡ್ ಬಾಲಾಜಿ, ಟಿಟಿಡಿ ಮತ್ತು ಯಾತ್ರಾರ್ಥಿಗಳಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೂ ನಾವು ಆಕೆಗೆ ನೋಟಿಸ್ ನೀಡಲಿದ್ದೇವೆ ಎಂದರು. ಈ ನಡುವೆ ವಿಘ್ನೇಶ್ ಶಿವನ್ ಹೇಳಿಕೆ ನೀಡಿ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಗುರುವಾರ ಮದುವೆಯಾದರು. ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್ ಮತ್ತು ನಿರ್ದೇಶಕ ಅಟ್ಲಿ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.
LSS looks so pretty in the Yellow Saree #WikkyNayan at Tirupathi now.#WikkiNayanWedding #LadySuperStar #Nayanthara#NayanWikki #Tirumala pic.twitter.com/WkgMfnQtoO
— NayantharaLive (@NayantharaLive) June 10, 2022