'ನಮ್ ನಾನಿ ಮದ್ವೆ ಪ್ರಸಂಗ' ಚಿತ್ರೀಕರಣ ಪೂರ್ಣಗೊಳಿಸಿದ ಹೇಮಂತ್ ಹೆಗಡೆ
ಹೌಸ್‌ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.
Published: 13th June 2022 11:55 AM | Last Updated: 13th June 2022 11:55 AM | A+A A-

ಹೇಮಂತ್ ಹೆಗಡೆ
ಹೌಸ್‌ಫುಲ್ ಮತ್ತು ನಿಂಬೆಹುಲಿ ಚಿತ್ರಗಳ ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಮುಂದಿನ ಚಿತ್ರ ನಮ್ ನಾನಿ ಮದ್ವೆ ಪ್ರಸಂಗ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಕೆಲವು ಸ್ಟಿಲ್ ಗಳನ್ನು ಹಂಚಿಕೊಂಡಿದ್ದಾರೆ.
ನಮ್ ನಾನಿ ಮದ್ವೆ ಪ್ರಸಂಗ ಕಾಮಿಡಿ ಡ್ರಾಮಾ ಚಿತ್ರವಾಗಿದೆ. ಉತ್ತರ ಕನ್ನಡದ ಸ್ಥಳೀಯತೆಯನ್ನು ಹೊರತಂದಿರುವ ಮೊದಲ ಕನ್ನಡ ಚಿತ್ರ ಇದಾಗಿದ್ದು, ಯಕ್ಷಗಾನದಂತಹ ಸ್ಥಳೀಯ ಕಲೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಿವಾಹಕ್ಕೆ ಯುವತಿಯರ ಹುಡುಕಲು ಇಲ್ಲಿನ ರೈತರು ಇಂದಿಗೂ ಸಂಕಷ್ಟ ಪಡುತ್ತಿದ್ದು, ಅದನ್ನೂ ಚಿತ್ರದಲ್ಲಿ ವಿವರಿಸಲಾಗಿದೆ. ಕೆಲ ನೈಜ ಘಟನೆಗಳನ್ನು ಕಾಮಿಡಿ ರೀತಿಯಲ್ಲಿ ಜನರ ಮನಸ್ಸು ತಟ್ಟುವಂತೆ ಮಾಡಲಾಗಿದೆ ಎಂದು ಹೇಮಂತ್ ಹೇಳಿದ್ದಾರೆ.
ಚಿತ್ರ ನಿರ್ದೇಶನದ ಜೊತೆಗೆ ಹೇಮಂತ್ ಹೆಗಡೆಯವರು ಗೀತಾಂಜಲಿ ಮಂಗಲ್, ಶ್ರುತಿ ನಂದೀಶ್, ಪದ್ಮಜಾ ರಾವ್, ರಾಜೇಶ್ ನಟರಂಗ, ಗಿರಿ ಶಿವಪ್ಪ ಮತ್ತು ಮಧು ಹೆಗಡೆ ಜೊತೆಯಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಕೃಷ್ಣ ಭಂಜನ್ ಅವರ ಛಾಯಾಗ್ರಹಣವಿದ್ದು, ವಿ ಮನೋಹರ್ ಮತ್ತು ರವಿ ಮುರೂರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.