'ಮೇಡ್ ಇನ್ ಚೈನಾ' ಸಿನಿಮಾವನ್ನು ಆರಂಭದಲ್ಲಿ ಒಟಿಟಿಗಾಗಿಯೇ ಬರೆಯಲಾಗಿತ್ತು: ಪ್ರೀತಂ ತೆಗ್ಗಿನಮನೆ
ಸಾಂಕ್ರಾಮಿಕ ಲಾಕ್‌ಡೌನ್‌ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ.
Published: 16th June 2022 01:36 PM | Last Updated: 16th June 2022 07:27 PM | A+A A-

ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್
ಸಾಂಕ್ರಾಮಿಕ ಲಾಕ್‌ಡೌನ್‌ನಿಂದ ನಟ ನಾಗಭೂಷಣ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಅವರ ಹಿಂದಿನ ಚಿತ್ರ, ಇಕ್ಕಟ್ ನಂತೆಯೇ, ಅವರ ಮುಂಬರುವ ಚಿತ್ರ, ಮೇಡ್ ಇನ್ ಚೀನಾ ಕೂಡ ವಿಶೇಷವಾಗಿದೆ. ನಿರ್ದೇಶಕ ಪ್ರೀತಂ ತೆಗ್ಗಿನಮನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ, ಇದರಲ್ಲಿ ಪ್ರಿಯಾಂಕಾ ತಿಮ್ಮೇಶ್ ಕೂಡ ನಟಿಸಿದ್ದಾರೆ.
ಕನ್ನಡದ ಮೊದಲ ವರ್ಚುವಲ್ ಸಿನಿಮಾ, ನಟ ನಾಗಭೂಷಣ್ ಅಭಿನಯದ ‘ಮೇಡ್ ಇನ್ ಚೈನಾ’ ಜೂನ್ 17ರಂದು ಆಯ್ದ ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಷ್ಟೇ ಬಿಡುಗಡೆಯಾಗಲಿದೆ. ‘ಅಯೋಗ್ಯ’, ‘ರತ್ನಮಂಜರಿ’ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ನಿರ್ದೇಶನದ ಜೊತೆಗೆ ಗ್ರಾಫಿಕ್, ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನೂ ಪ್ರೀತಮ್ ನಿಭಾಯಿಸಿದ್ದಾರೆ.
‘ಮಲಯಾಳಂನಲ್ಲಿ ‘ಸಿ ಯೂ ಸೂನ್’ ಹಾಗೂ ಬಾಲಿವುಡ್‌ನಲ್ಲಿ ‘ಸರ್ಚಿಂಗ್’ ಎನ್ನುವ ವರ್ಚುವಲ್ ಸಿನಿಮಾಗಳು ಬಂದಿದ್ದವು. ಇವರೆಡೂ ಸಿನಿಮಾಗಳು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಾಗಿದ್ದವು. ಇಂಥ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸೂಕ್ತವಾದುವು. ಆದರೆ ಚಿತ್ರಮಂದಿರಗಳಲ್ಲೂ ಇಂಥ ಸಿನಿಮಾವನ್ನು ಜನರು ವೀಕ್ಷಿಸಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ನಮ್ಮ ಸಿನಿಮಾವನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಫ್ಯಾಮಿಲಿ ಡ್ರಾಮಾ ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಕಥೆ ಹೆಣೆಯಲಾಗಿದೆ’ ಎಂದರು.
ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಂಡು, ಮನರಂಜನೆಯ ರಸದೌತಣ ಬಡಿಸಿದ್ದ ‘ಇಕ್ಕಟ್’ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ನಾಗಭೂಷಣ್ ಹೆಜ್ಜೆ ಇಟ್ಟಿದ್ದರು. ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿದ ಅವರು, ‘ಇಕ್ಕಟ್ ಸಿನಿಮಾವೂ ಲಾಕ್‌ಡೌನ್ ವಿಷಯಾಧಾರಿತ ಸಿನಿಮಾವಾಗಿತ್ತು. ಇದು ಸಂಪೂರ್ಣ ಹಾಸ್ಯಮಯ ಸಿನಿಮಾವಾಗಿತ್ತು.
ಮೇಡ್ ಇನ್ ಚೈನಾ’ ಒಂದು ಭಾವನಾತ್ಮಕ ಸಿನಿಮಾ. ನಾನು ಕೇವಲ ಕಾಮಿಡಿಗಷ್ಟೇ ಸೀಮಿತವಲ್ಲ ಎನ್ನುವುದನ್ನು ಪ್ರೇಕ್ಷಕರಿಗೆ ತಿಳಿಸುವ ಉದ್ದೇಶದಿಂದ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡೆ. ಲಾಕ್‌ಡೌನ್‌ನಲ್ಲಿ ನಾಲ್ಕು ಗೋಡೆಗಳ ನಡುವೆ ಇರುವುದು ಎಷ್ಟು ಕಷ್ಟ, ತೀರಾ ಹತ್ತಿರವಾಗಿದ್ದವರು ಏಕಾಏಕಿ ದೂರವಾದಾಗ ಎದುರಾಗುವ ಆತಂಕ, ಸಂಕಟವನ್ನು ಈ ಸಿನಿಮಾ ಕಟ್ಟಿಕೊಟ್ಟಿದೆ’ ಎಂದರು.
2020ರ ಮಾರ್ಚ್‌ನಲ್ಲಿ ನಡೆಯುವ ಕಥೆ ಇದಾಗಿದೆ. ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಚೀನಾಗೆ ಹೋದ ಸಂದರ್ಭದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತದೆ. ಆತ ಕೋವಿಡ್ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಕಾರಣ, ಆತನ ಮನೆಯನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಇತ್ತ ಭಾರತದಲ್ಲಿ ಆತನ ಪತ್ನಿ ತುಂಬು ಗರ್ಭಿಣಿ. ಇಂಥ ಸನ್ನಿವೇಶದಲ್ಲಿ ಆತ ಅನುಭವಿಸುವ ತೊಳಲಾಟ, ದುಗುಡ, ದುಃಖವನ್ನು ಇಲ್ಲಿ ತೆರೆ ಮೇಲೆ ತರಲಾಗಿದೆ. ಜನರಿಗೆ ಈ ಸಿನಿಮಾ ಕಥೆ ಬೇಗ ಹತ್ತಿರವಾಗುತ್ತದೆ. ಎರಡು ವರ್ಷದ ಹಿಂದಿನ ನೆನಪುಗಳನ್ನು ಈ ಸಿನಿಮಾ ಮೆಲುಕು ಹಾಕಲಿದೆ’ ಎಂದರು ನಾಗಭೂಷಣ್.
ಅಭಿರಾಮ್ ಶಾಸ್ತ್ರಿಯಾಗಿ ನಾಗಭೂಷಣ್ ನಟಿಸಿದ್ದು, ಮೈಥಿಲಿ ಭಟ್ ಆಗಿ ಪ್ರಿಯಾಂಕ ತಿಮ್ಮೇಶ್ ಬಣ್ಣಹಚ್ಚಿದ್ದಾರೆ. ನಿಶ್ಚಲ್ ವಿ. ಹಾಗೂ ಪ್ರೀತಮ್ ತೆಗ್ಗಿನಮನೆ ‘ಮೇಡ್ ಇನ್ ಚೈನಾ’ ಸಿನಿಮಾಗೆ ಕಥೆ ಬರೆದಿದ್ದು, ವೀವಾನ್ ರಾಧಾಕೃಷ್ಣ ಸಂಗೀತ ನೀಡಿದ್ದಾರೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್‌ನಡಿ ನಂದಕಿಶೋರ್ ಸಿನಿಮಾಗೆ ಬಂಡವಾಳ ಹೂಡಿದ್ದು, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್‌ನಡಿ ಟಿ.ಆರ್.ಚಂದ್ರಶೇಖರ್ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ.