
ಉಮಾಪತಿ ಶ್ರೀನಿವಾಸ ಗೌಡ
ದರ್ಶನ್ ಅವರ ರಾಬರ್ಟ್ ಚಿತ್ರ ನಿರ್ಮಿಸಿದ ನಿರ್ಮಾಪಕ ಉಮಾಪತಿ ಎಸ್ ಸದ್ಯ ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಇದರ ಜೊತೆಗೆ ರ್ಮಾಪಕರು ಐತಿಹಾಸಿಕ ಪ್ರಾಜೆಕ್ಟ್ ಸಿಂಧೂರ ಲಕ್ಷ್ಮಣನ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಸಹ ಪ್ರಾರಂಭಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟಿಂಗ್ ಪ್ರಕ್ರಿಯೆ ಶುರುವಾಗಿದೆ.
ಪುನೀತ್ ರುದ್ರನಾಗ್ ಮತ್ತು ತಂಡವು ಪ್ರಸ್ತುತ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ. ಪುನೀತ್ ಈ ಹಿಂದೆ ಪ್ರಶಾಂತ್ ನೀಲ್ ಅವರ ಉಗ್ರಂ ಮತ್ತು ಕೆಜಿಎಫ್ ಚಾಪ್ಟರ್ 1 ನಲ್ಲಿ ಕೆಲಸ ಮಾಡಿದ್ದಾರೆ. ಸಿಂಧೂರ ಲಕ್ಷ್ಮಣ ಸಿನಿಮಾ ಬಗ್ಗೆ ನಿರ್ಮಾಪಕರು ಸಿನಿಮಾ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಉಪಾಧ್ಯಕ್ಷ' ಸಿನಿಮಾದಲ್ಲಿ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ ಹಾಸ್ಯ ನಟ ಚಿಕ್ಕಣ್ಣ!
ಸಿಂಧೂರ ಲಕ್ಷ್ಮಣ ಒಂದು ನಿರ್ದಿಷ್ಟ ಸಮುದಾಯದ ಕಥೆ ಆಧರಿಸಿದ ಐತಿಹಾಸಿಕ ಸಿನಿಮಾವಾಗಿದೆ, ಹೀಗಾಗಿ ಸಮಗ್ರ ಸಂಶೋಧನಾ ಕಾರ್ಯದ ಅಗತ್ಯವಿದೆ ಎಂದು ಉಮಾಪತಿ ಹೇಳಿದ್ದಾರೆ. "ಸ್ಟೋರಿ ಬೋರ್ಡ್ ಸಿದ್ಧಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಚಿತ್ರಕ್ಕೆ ಬೌಂಡ್ ಸ್ಕ್ರಿಪ್ಟ್ ಮುಗಿದ ನಂತರ, ಯೋಜನೆಯನ್ನು ಹೇಗೆ ಮುಂದುವರಿಸಬೇಕೆಂದು ನಾನು ನಿರ್ಧರಿಸುತ್ತೇನೆ" ಎಂದು ಉಮಾಪತಿ ತಿಳಿಸಿದ್ದಾರೆ.