ಕೆ.ಆರ್.ಜಿ ಸ್ಟುಡಿಯೋ ನಿರ್ಮಾಣದ 'ಉತ್ತರಕಾಂಡ'ಕ್ಕೆ ರೋಹಿತ್ ಪದಕಿ ನಿರ್ದೇಶನ
ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
Published: 18th June 2022 01:26 PM | Last Updated: 18th June 2022 01:34 PM | A+A A-

ರೋಹಿತ್ ಪದಕಿ
ಕೆ.ಆರ್.ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾವೊಂದು ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ‘ಉತ್ತರಕಾಂಡ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶಕ ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಜನವರಿ 2023ರಿಂದ ಈ ಸಿನಿಮಾ ಶುರುವಾಗಲಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸುತ್ತಿರುವ ಉತ್ತರಕಾಂಡವು ಉತ್ತರದ ದರೋಡೆಕೋರರ ಬಗ್ಗೆ ಬರೆಯಲಾಗಿದೆ. ಸಿನಿಮಾ ಟೈಟಲ್ ಮತ್ತು ಡೈರೆಕ್ಟರ್ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿದ್ದಾರೆ. 2023ರ ಜನವರಿಯಿಂದ ಶೂಟಿಂಗ್ ಆರಂಭವಾಗಲಿದೆ.
ರೋಹಿತ್ ಪದಕಿ ಅವರ ಹಿಂದಿನ ಚಿತ್ರವೂ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿದೆ. ಹೊಯ್ಸಳ, ಧನಂಜಯ್ ಜೊತೆಗಿನ ಎರಡನೇ ಸಿನಿಮಾ ಕೂಡ ಬೆಳಗಾವಿಯಲ್ಲಿ ಸೆಟ್ಟೇರಿದೆ. ಉತ್ತರಕಾಂಡ ತಂಡವು ಇನ್ನೂ ಪ್ರಮುಖ ಪಾತ್ರವನ್ನು ಅಂತಿಮಗೊಳಿಸಿಲ್ಲ.