ಕಾಶ್ಮೀರಿ ಪಂಡಿತರ ನರಮೇಧ ಕುರಿತ ಹೇಳಿಕೆ ವಿವಾದ: ನಟಿ ಸಾಯಿ ಪಲ್ಲವಿ ಸ್ಪಷ್ಟನೆ

1900ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಹಾಗೂ ಇತ್ತೀಚಿನ ಗುಂಪು ಹತ್ಯೆ ಎರಡೂ ಒಂದೇ ಎಂಬ ನಟಿ ಸಾಯಿ ಪಲ್ಲವಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ

ಚೆನ್ನೈ:  1900ರಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧ ಹಾಗೂ ಇತ್ತೀಚಿನ ಗುಂಪು ಹತ್ಯೆ ಎರಡೂ ಒಂದೇ ಎಂಬ ನಟಿ ಸಾಯಿ ಪಲ್ಲವಿ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಒಂದು ವರ್ಗದ ನೆಟ್ಟಿಗರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಯಿ ಪಲ್ಲವಿ, ಇದೀಗ ಸ್ಪಷ್ಟನೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವೊಂದನ್ನು ಹಂಚಿಕೊಂಡಿದ್ದು, ತನ್ನ ನಿಲುವು ಏನೆಂಬುದನ್ನು  ಸ್ಪಷ್ಪಪಡಿಸಿದ್ದಾರೆ.

ಇತ್ತೀಚಿಗೆ ನಡೆಸಲಾದ ಸಂದರ್ಶನವೊಂದರಲ್ಲಿ ಎಡ ಅಥವಾ ಬಲಂಪಥೀಯರಲ್ಲಿ ಯಾವುದನ್ನು ಬೆಂಬಲಿಸುತ್ತೀರಾ ಎಂದು ಕೇಳಲಾಗಿತ್ತು. ನಾನು ತಟಸ್ಥ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನಮ್ಮ ನಂಬಿಕೆಗಳೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವ ಮೊದಲು ನಾವು ಉತ್ತಮ ಮನುಷ್ಯರಾಗಬೇಕು. ತುಳಿತಕ್ಕೊಳಗಾದವರನ್ನ ರಕ್ಷಿಸಬೇಕು ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಮೂರು ತಿಂಗಳ ಹಿಂದೆ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ನೋಡಿದ್ದೇನೆ ಮತ್ತು ಕಾಶ್ಮೀರಿ ಪಂಡಿತರ ಅವಸ್ಥೆ, ಆ ಜನರ ಸಂಕಷ್ಟ ಕಂಡು ವಿಚಲಿತಳಾಗಿದ್ದೇನೆ. ಈ ಕುರಿತು ಅಗ್ನಿಹೋತ್ರಿ ಅವರಿಗೆ ಹೇಳಿದ್ದೇನೆ. ಇದೇ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಜನಸಮೂಹದ ಹತ್ಯೆಯ ಘಟನೆಯೊಂದಿಗೆ ತಾನು ಎಂದಿಗೂ ಬರಲು ಸಾಧ್ಯವಿಲ್ಲ ಎಂದು ನಟಿ ಹೇಳಿದ್ದಾರೆ.

ಯಾವುದೇ ರೂಪದಲ್ಲಿ ಹಿಂಸೆ ತಪ್ಪು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ ಎಂದು ಪಲ್ಲವಿ ವಿಡಿಯೋ ಮೂಲಕ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com