ನನ್ನ 'ವಿಕ್ರಮ್' ಪಾತ್ರ ಎಲ್ಲಾ ಮಧ್ಯಮವರ್ಗದವರಿಗೂ ಸಂಬಂಧಿಸಿದ್ದಾಗಿದೆ: ಸುನಿಲ್ ರಾವ್

ನಿರ್ದೇಶಕ ಹೇಮಂತ್ ಕುಮಾರ್ ಅವರ ತುರ್ತು ನಿರ್ಗಮನ ಸಿನಿಮಾ ಜೂ.24 ರಂದು ಬಿಡುಗಡೆಯಾಗುತ್ತಿದ್ದು ನಟ ಸುನಿಲ್ ದೀರ್ಘಕಾಲದ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. 
ಸುನಿಲ್ ರಾವ್
ಸುನಿಲ್ ರಾವ್

ಬೆಂಗಳೂರು: ನಿರ್ದೇಶಕ ಹೇಮಂತ್ ಕುಮಾರ್ ಅವರ ತುರ್ತು ನಿರ್ಗಮನ ಸಿನಿಮಾ ಜೂ.24 ರಂದು ಬಿಡುಗಡೆಯಾಗುತ್ತಿದ್ದು ನಟ ಸುನಿಲ್ ದೀರ್ಘಕಾಲದ ನಂತರ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. 

ಓರ್ವ ವ್ಯಕ್ತಿಗೆ ತನ್ನ ಜೀವನದ ಕೊನೆಯ ದಿನಗಳನ್ನು ಪುನಃ ಜೀವಿಸಲು ಅವಕಾಶ ಸಿಕ್ಕರೆ ಏನಾಗಲಿದೆ ಎಂಬ ಅತ್ಯಂತ ಆಸಕ್ತಿದಾಯಕ ಕಥಾಹಂದರ ಹೊಂದಿರುವ ತುರ್ತು ನಿರ್ಗಮನದಲ್ಲಿ ಸುನಿಲ್ ರಾವ್ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದು,  ಸುಧಾರಾಣಿ, ಅಚ್ಯುತ್ ಕುಮಾರ್, ಹಿತಾ ಚಂದ್ರಶೇಖರ್, ಸಂಯುಕ್ತ ಹೆಗ್ಡೆ ತಾರಾಗಣವಿದೆ. ಡರ್ಕ್ ಕಾಮಿಡಿ ವಿಭಾಗದ ಸಿನಿಮಾ ಇದಾಗಿದ್ದು, 

ಸಿನಿಮಾ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಸುನಿಲ್ ರಾವ್ ಹಾಗೂ ರಾಜ್ ಬಿ ಶೆಟ್ಟಿ ಮಾತನಾಡಿದ್ದಾರೆ. 2010 ರಲ್ಲಿ ಪ್ರೇಮಿಸಂ ಎಂಬ ಸಿನಿಮಾದಲ್ಲಿ ಸುನಿಲ್ ರಾವ್ ನಟಿಸಿದ್ದರು. ಆ ಬಳಿಕ ದೀರ್ಘಾವಧಿ ಬ್ರೇಕ್ ತೆಗೆದುಕೊಂಡಿದ್ದರು. 

"ಏಕತಾನತೆ ಕಾಡುತ್ತಿದೆ ಎಂಬ ಕಾರಣಕ್ಕೆ ಸಣ್ಣ ಬ್ರೇಕ್ ತೆಗೆದುಕೊಳ್ಳಲು ಬಯಸಿದ್ದೆ. ಬಹಳಷ್ಟು ಹಿಂದೆಯೇ ಮತ್ತೆ ವಾಪಸ್ಸಾಗುವುದಕ್ಕೆ ಯತ್ನಿಸಿದ್ದೆ. ಆದರೆ 6-7 ವರ್ಷಗಳು ವಿಳಂಬವಾಯಿತು. ಅಂತಿಮವಾಗಿ 12 ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ಈ ನಡುವೆ ಲೂಸ್ ಕನೆಕ್ಷನ್ ಎಂಬ ವೆಬ್ ಸೀರೀಸ್ ಮಾಡಿದ್ದೆ.  ತಾವು ಕಂಡಂತೆ ಸಿನಿಮಾ ರಂಗದಲ್ಲಿ ಈ 12 ವರ್ಷಗಳಲ್ಲಿ ಆಗಿರುವ ಬದಲಾವಣೆ ಎಂದರೆ ಅದು ಫಿಲ್ಮ್ ಕ್ಯಾಮರಾದಿಂದ ಡಿಜಿಟಲ್ ಕ್ಯಾಮರಾ ಎನ್ನುತ್ತಾರೆ ಸುನಿಲ್ 

"ಫಿಲ್ಮ್ ರೀಲ್ ಗಳನ್ನು ಬಳಸುತ್ತಿದ್ದಾಗ, ರೀಲ್ ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ನಟರು ತಾಂತ್ರಿಕ ವರ್ಗದವರ ಮೇಲೆ ಹೆಚ್ಚಿನ ಒತ್ತಡ ಇರುತ್ತಿತ್ತು. ಆದ್ದರಿಂದ 2-3 ಟೇಕ್ ಗಿಂತಲೂ ಹೆಚ್ಚಿನ ಟೇಕ್ ತೆಗೆದುಕೊಳ್ಳುವುದಕ್ಕೆ ಸಾಧ್ಯವಿರುತ್ತಿರಲಿಲ್ಲ. ತಂತ್ರಜ್ಞಾನದಲ್ಲಿ ಪ್ರಗತಿಯಾಗಿರುವುದರಿಂದ ಜೀವನದ ವಿವಿಧ ಹಂತಗಳಲ್ಲಿರುವವರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಬಹುದಾಗಿದೆ. ಇದಕ್ಕೆ ನಮ್ಮ ನಿರ್ದೇಶಕ ಹೇಮಂತ್ ಕುಮಾರ್ ಅತ್ಯುತ್ತಮ ಉದಾಹರಣೆ" ಎಂದು ಸುನಿಲ್ ಹೇಳಿದ್ದಾರೆ. 

ಇಂಜಿನಿಯರ್ ಆಗಿದ್ದ ಹೇಮಂತ್ ಸಿನಿಮಾ ಆಸಕ್ತಿಯ ಕಾರಣಕ್ಕೆ ಉದ್ಯೋಗವನ್ನು ಬಿಟ್ಟು ಈ ಕ್ಷೇತ್ರಕ್ಕೆ ಬಂದಿದ್ದಾರೆ ಎನ್ನುವ ಸುನಿಲ್, ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಸಿನಿಮಾದಲ್ಲಿ ನಾನು ನಟಿಸಿರುವ ವಿಕ್ರಮ್ ಪಾತ್ರ ಎಲ್ಲಾ ಮಧ್ಯಮ ವರ್ಗದ ಮನೆಗಳಿಗೂ ಸುಲಭವಾಗಿ ಹತ್ತಿರವಾಗಬಲ್ಲದ್ದಾಗಿದೆ. ವಿಕ್ರಮ್ ನ ಪಾತ್ರ ವಿಶ್ರಾಂತಿ ವರ್ತನೆ (ಸ್ವೇಚ್ಛಾಚಾರಿ, ಬೇಜವಾಬ್ದಾರಿತನ) ಯನ್ನು ಹೊಂದಿರುವ ಬುದ್ಧಿವಂತ ಹುಡುಗನದ್ದಾಗಿದ್ದು, ಸಮಯ ಮತ್ತು ಜೀವನಕ್ಕೆ ಬೆಲೆ ಕೊಡದ ವ್ಯಕ್ತಿಯಾಗಿರುತ್ತಾನೆ. ಇಂತಹ ವ್ಯಕ್ತಿಗೆ ತುರ್ತು ಪರಿಸ್ಥಿತಿ ಎದುರಾಗಿ ಕಾರ್ಯಪ್ರವೃತ್ತನಾಗದೇ ಬೇರೆ ದಾರಿಯೇ ಇಲ್ಲ ಎಂಬಂತಾದರೆ ಏನಾಗಲಿದೆ ಎಂಬುದೇ ಚಿತ್ರದ ಕಥಾಹಂದರ ಎನ್ನುತ್ತಾರೆ ಸುನಿಲ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com