ಹೊಸಬರಿಗೆ ಇದು ಉತ್ತಮ ಆರಂಭ: 'ತ್ರಿವಿಕ್ರಮ' ಸಿನಿಮಾ ಪ್ರದರ್ಶನದ ಕುರಿತು ವಿಕ್ರಮ್ ರವಿಚಂದ್ರನ್ ಮಾತು
ಕರ್ನಾಟಕದ ಕೆಲವು ಭಾಗಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಕ್ರೀನ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಹೊಸಬರಿಗೆ ಇದೊಂದು ಉತ್ತಮ ಆರಂಭ ಎಂದು ವಿಕ್ರಮ್ ಸಂತಸ ವ್ಯಕ್ತಪಡಿಸಿದ್ದಾರೆ.
Published: 29th June 2022 12:30 PM | Last Updated: 29th June 2022 01:31 PM | A+A A-

ತ್ರಿವಿಕ್ರಮ ಸಿನಿಮಾ ಸ್ಟಿಲ್
ರವಿಚಂದ್ರನ್ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಚಿತ್ರ ತ್ರಿವಿಕ್ರಮ ಚಿತ್ರಕ್ಕೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಸಹನಮೂರ್ತಿ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಜೂನ್ 10 ರಂದು ಬಿಡುಗಡೆಯಾಗಿತ್ತು.
ಕರ್ನಾಟಕದ ಕೆಲವು ಭಾಗಗಳಲ್ಲಿ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಕ್ರೀನ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಹೊಸಬರಿಗೆ ಇದೊಂದು ಉತ್ತಮ ಆರಂಭ ಎಂದು ಸಂತಸ ವ್ಯಕ್ತಪಡಿಸಿರುವ ವಿಕ್ರಂ, ಕುಟುಂಬ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದನ್ನು ನೋಡುವುದು ಅಪಾರ ಖುಷಿ ತಂದಿದೆ ಎಂದಿದ್ದಾರೆ. ನಾನು ವಿವಿಧ ಥಿಯೇಟರ್ಗಳಿಗೆ ಭೇಟಿ ನೀಡುತ್ತಿದ್ದೇನೆ ಮೊದಲ ದಿನವೇ 'ಹೌಸ್ಫುಲ್' ಬೋರ್ಡ್ಗಳನ್ನು ನೋಡುತ್ತಿರುವುದಕ್ಕೆ ಹಾಗೂ ಶೇ. 60 ಆಕ್ಯುಪೆನ್ಸಿ ಇರುವುದಕ್ಕೆ ವಿಕ್ರಮ್ ಸಂತಸ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ: ರವಿಚಂದ್ರನ್ ಪುತ್ರನಿಗೆ ನಿರ್ದೇಶನ ಮಾಡುವುದು ಹೆಮ್ಮೆಯ ವಿಷಯ: ತ್ರಿವಿಕ್ರಮ ಡೈರೆಕ್ಟರ್ ಸಹನಾ ಮೂರ್ತಿ
ಗೌರಿ ಎಂಟರ್ಟೈನರ್ಸ್ ಅಡಿಯಲ್ಲಿ ಸೋಮಣ್ಣ ನಿರ್ಮಿಸಿದ ತ್ರಿವಿಕ್ರಮ ಚಿತ್ರದ ಮೂಲಕ ರವಿಚಂದ್ರನ್ ಪುತ್ರ ವಿಕ್ರಮ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರದ ನಾಯಕಿ ಆಕಾಂಕ್ಷಾ ಶರ್ಮಾ ಗೆ ಇದು ಕನ್ನಡದಲ್ಲಿ ಮೊದಲ ಚಿತ್ರವಾಗಿದೆ. ತ್ರಿವಿಕ್ರಮ್ ಬಿಡುಗಡೆಗಾಗಿ ಕಾಯುತ್ತಿದ್ದ ವಿಕ್ರಮ್ ತಮ್ಮ ಮುಂದಿನ ಸಿನಿಮಾ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.