ಸಿದ್ಧಾರ್ಥ್ ಮರಡೆಪ್ಪ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಹೊಸ ಟೈಟಲ್ 'ಜಯ ಜಯ ಜಾನಕಿರಾಮ'

ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರಕ್ಕೆ 'ಜಯ ಜಯ ಜಾನಕಿರಾಮ ಎಂದು ಹೆಸರಿಡಲಾಗಿದ್ದು, ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ.
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರಕ್ಕೆ 'ಜಯ ಜಯ ಜಾನಕಿರಾಮ' ಎಂದು ಹೆಸರಿಡಲಾಗಿದ್ದು, ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. 

ಕನ್ನಡ ಚಿತ್ರರಂಗ ಹಿರಿಯ ನಟ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ಹಾಗೂ ವಿಕ್ಟರಿ 2, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟಿಸಿರುವ ನಟಿ ಅಪೂರ್ವ ಅವರು ಚಿತ್ರದಲ್ಲಿ ನಾಯಕ ನಟ ಹಾಗೂ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. 

ನಿರ್ದೇಶಕ ಸಿದ್ಧಾರ್ಥ್ ಮರಡೆಪ್ಪ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರವಾದರೂ ಕನ್ನಡ ಸಿನಿಮಾರಂಗ ಅವರಿಗೆ ಹೊಸದೇನಲ್ಲ. ಮೂಲತಃ ಉತ್ತರ ಕರ್ನಾಟಕದವರಾದ ಸಿದ್ಧಾರ್ಥ್, ಹಲವು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ‘ಮಾಸ್ತಿಗುಡಿ’, ‘ಮೈನಾ’, ‘ದೃಶ್ಯ 1’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಆ ಅನುಭವವೇ ಈಗ ಚೊಚ್ಚಲ ನಿರ್ದೇಶನಕ್ಕೆ ಕಾರಣವಾಗಿದೆ.

ಜಯ ಜಯ ಜಾನಕಿರಾಮ ಚಿತ್ರ ಕಥೆಯು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಹದಿಹರೆಯದವರ ಪ್ರೇಮಕಥೆಯ ಸುತ್ತ ಸುತ್ತುತ್ತದೆ ಮತ್ತು ಇದು ಮಾಸ್ ಎಂಟರ್ಟೈನರ್ ಚಿತ್ರ ಕೂಡ ಆಗಿದೆ.

ರವಿವರ್ಮ ಅವರ ಆಕ್ಷನ್ ಸೀಕ್ವೆನ್ಸ್‌ನೊಂದಿಗೆ ಚಿತ್ರವು ಮೊದಲಾರ್ಧ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಉದಯ್ ಬಲ್ಲಾಳ್ ಅವರ ಛಾಯಾಗ್ರಹಣವಿದೆ.

ಚಿತ್ರದಲ್ಲಿ ರವಿಶಂಕರ್ ಕಾಣಿಸಿಕೊಳ್ಳುತ್ತಿದ್ದು, ಖಳನಟರಾಗಿ ಅಬ್ಬರಿಸುತ್ತಿದ್ದಾರೆ. ಬ್ರೌನ್‌ಬುಲ್ ಸ್ಟುಡಿಯೋಸ್‌ನಿಂದಚಿತ್ರ ನಿರ್ಮಿಸಲಾಗುತ್ತಿರುವ ಈ ಚಿತ್ರದಲ್ಲಿ ನಟಿ ಶ್ರುತಿ, ತಾರಾ, ರಾಜು ತಾಳಿಕೋಟೆ ನಟಿಸುತ್ತಿದ್ದಾರೆ. 

ಇನ್ನು ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಅವರು ಸೀತಾಯಾನ ಚಿತ್ರದ ಮೂಲಕ ಸ್ಯಾಂಡಲ್'ವುಡ್ ಪ್ರವೇಶಿಸಿದ್ದು, ಇವರು ನಟಿಸಿರುವ ಓ ಮೈ ಲವ್ ಚಿತ್ರ ಜುಲೈ 15 ರಂದು ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com