ಸಾಮಾನ್ಯ ಮನುಷ್ಯನ ಜೀವನ ಮತ್ತು ಹಕ್ಕುಗಳಿಗಾಗಿ ನಡೆಯುವ ಹೋರಾಟವೇ 'ಡಿಯರ್ ವಿಕ್ರಮ್': ಸತೀಶ್ ನೀನಾಸಂ

ಸತೀಶ್ ನೀನಾಸಂ ನಟಿಸಿರುವ  ಡಿಯರ್ ವಿಕ್ರಮ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.  ಸಿನಿಮಾವನ್ನು ನಂದೀಶ್ ನಿರ್ದೇಶನ ಮಾಡಿದ್ದ, ಜೇಕಬ್ ವರ್ಗೀಸ್ ನಿರ್ಮಾಣ ಮಾಡಿದ್ದಾರೆ.
ಡಿಯರ್ ವಿಕ್ರಮ್ ಸ್ಟಿಲ್
ಡಿಯರ್ ವಿಕ್ರಮ್ ಸ್ಟಿಲ್

ಸತೀಶ್ ನೀನಾಸಂ ನಟಿಸಿರುವ  ಡಿಯರ್ ವಿಕ್ರಮ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವನ್ನು ನಂದೀಶ್ ನಿರ್ದೇಶನ ಮಾಡಿದ್ದ, ಜೇಕಬ್ ವರ್ಗೀಸ್ ನಿರ್ಮಾಣ ಮಾಡಿದ್ದಾರೆ.

ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಅಚ್ಯುತಕುಮಾರ್ ಹಾಗೂ ವಸಿಷ್ಟ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಜೂನ್ 30 ರಂದು ವೂಟ್ ಸೆಲೆಕ್ಟ್ ನಲ್ಲಿ ತೆರೆ ಕಾಣಲಿದೆ.

ಡಿಯರ್ ವಿಕ್ರಮ್ ಸಿನಿಮಾದಲ್ಲಿ ಸತೀಶ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ, ಇದರಿಂದ ವೃತ್ತಿ ಜೀವನದಲ್ಲಿ ಸರಿಯಾದ ಹಂತಕ್ಕೆ ಬಂದಿದ್ದಾಗಿ ನಂಬಿದ್ದಾರೆ. ಡಿಯರ್ ವಿಕ್ರಮ್ ಸಿನಿಮಾ ತಂಡವು ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ಸಿನಿಮಾದ ಕಥೆ ಇಂದಿಗೂ ಪ್ರಸ್ತುತವಾಗಿದೆ, ಇದರ ಬಗ್ಗೆ ಇಂದಿಗೂ ಬಿಸಿ ಬಿಸಿ ಚರ್ಚೆ ನಡೆಯುತ್ತಿವೆ ಎಂದು ಸತೀಶ್ ತಿಳಿಸಿದ್ದಾರೆ.

<strong>ಸತೀಶ್ ನೀನಾಸಂ</strong>
ಸತೀಶ್ ನೀನಾಸಂ

ಡಿಯರ್ ವಿಕ್ರಮ್ ಸಿನಿಮಾವನ್ನು ಹೊರತರಲು ನಾವು ಮಾಡಿದ ಹೋರಾಟವು ಅಷ್ಟೇ ಕಠಿಣವಾಗಿತ್ತು. ಚಿತ್ರಕ್ಕೆ ಆರಂಭದಲ್ಲಿ ಗೋಧ್ರಾ ಎಂದು ಹೆಸರಿಸಲಾಯಿತು, ನಂತರ ಸೆನ್ಸಾರ್ ಮಂಡಳಿಯಲ್ಲಿ ಟೈಟಲ್ ಬದಲಿಸುವಂತೆ ಸೂಚಿಸಲಾಯಿತು.  ಗೋದ್ರಾನ್ ಎಂದು ಬದಲಾಯಿಸಲು ಸಲಹೆ ನೀಡಿತು.

ಆದರೆ ಚಿತ್ರಕ್ಕೆ ನಾಯಕನ ಹೆಸರನ್ನು ಇಡಲು ತಂಡವು ಮುಂದಾಯಿತು ಎಂದು ಸತೀಶ್ ವಿವರಿಸುತ್ತಾರೆ. “ಶೂಟಿಂಗ್ ಪ್ರಕ್ರಿಯೆಯಲ್ಲಿ ನಾವು ಎದುರಿಸಿದ ಇನ್ನೊಂದು ಸವಾಲು. ಕೆಲವು ನಿರ್ಣಾಯಕ ಭಾಗಗಳನ್ನು ಚಿತ್ರೀಕರಿಸಲು ನಾವು ಭಾರೀ ಮಳೆಗಾಗಿ ಕಾಯಬೇಕಾಯಿತು. ನನ್ನ ಗಡ್ಡ ಬೆಳೆಸಲು ಹೇಳಿದರು. ಮತ್ತಿತರ ದೃಶ್ಯಗಳನ್ನು ಚಿತ್ರೀಕರಿಸಲು  ನಾವು ಸುಡುವ ಬೇಸಿಗೆಗಾಗಿ ಕಾಯುತ್ತಿದ್ದೆವು,

ಸಿನಿಮಾವೂ ಒಂದು ದಶಕದ ಪ್ರಯಾಣವಾಗಿರುವುದರಿಂದ ವಿವಿಧ ಪಾತ್ರಗಳ ಚಿತ್ರೀಕರಣ ಮಾಡಬೇಕಿತ್ತು.  ನಾವು ಅದನ್ನು ಥಿಯೇಟರ್ ಗಳಲ್ಲಿ ರಿಲೀಸ್ ಮಾಡಲು ಮುಂದಾದಾಗ ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟು ಎದುರಾಯಿತು. ಅದಾದ ನಂತರ ಒಟಿಟಿಯಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಯಿತು ಎಂದು ಸತೀಶ್ ತಿಳಿಸಿದ್ದಾರೆ.

ಸಿನಿಮಾದಲ್ಲಿ ಸತೀಶ್ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಶ್ರೀನಾಥ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಭರತ್ ಪಾತ್ರದಲ್ಲಿ ವಸಿಷ್ಠ ಸಿಂಹ ಮತ್ತುಅಚ್ಯುತ್ ಕುಮಾರ್ ರಾಜಕೀಯ ನಾಯಕನ ಪಾತ್ರಗಲ್ಲಿ ನಟಿಸಿದ್ದಾರೆ.

ಆದರೆ ಡಿಯರ್ ವಿಕ್ರಮ್ ಸಿನಿಮಾ ನಿಜ ಜೀವನದ ಘಟನೆಯಲ್ಲ ಎಂದು ಎಂದು ಸತೀಶ್ ನಿರಾಕರಿಸಿದ್ದಾರೆ. ಮನುಷ್ಯ ತನ್ನ ಜೀವನ ಮತ್ತು ಹಕ್ಕುಗಳಿಗಾಗಿ ನಡೆಸುವ ಹೋರಾಟ ದ ಕಥೆಯಾಗಿದೆ. ಆಕ್ಷನ್ ಮತ್ತು ಕಮರ್ಷಿಯಲ್ ಅಂಶಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಲಾಗಿದೆ ಎಂದು ಸತೀಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com