ನಿರ್ದೇಶಕ ತಂದೆಯಂತೆ, ಕಲಾವಿದರೆಲ್ಲಾ ಮಕ್ಕಳಂತೆ: ಬೈರಾಗಿ ಸಿನಿಮಾ ಬಗ್ಗೆ ಶಿವರಾಜ್ ಕುಮಾರ್

ನಿರ್ದೇಶಕರು ತಂದೆಯಂತೆ, ನಾವೆಲ್ಲರೂ ಮಕ್ಕಳು. ನನ್ನ ಪಾತ್ರವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಕೆಲವೇ ಕೆಲವು ನಿರ್ದೇಶಕರಲ್ಲಿ ವಿಜಯ್ ಮಿಲ್ಟನ್ ಒಬ್ಬರು.
ಬೈರಾಗಿ ಸಿನಿಮಾ ಸ್ಟಿಲ್
ಬೈರಾಗಿ ಸಿನಿಮಾ ಸ್ಟಿಲ್

ನಿರ್ದೇಶಕರು ತಂದೆಯಂತೆ, ನಾವೆಲ್ಲರೂ ಮಕ್ಕಳು. ನನ್ನ ಪಾತ್ರವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಕೆಲವೇ ಕೆಲವು ನಿರ್ದೇಶಕರಲ್ಲಿ ವಿಜಯ್ ಮಿಲ್ಟನ್ ಒಬ್ಬರು. ಧರಿಸುವ ಬಟ್ಟೆ ಹಾಗೂ ಆಕ್ಷನ್ ಬ್ಲಾಕ್ ಸೀಕ್ವೆನ್ಸ್‌ಗಳ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದರು. ಒಟ್ಟಿನಲ್ಲಿ ‘ಬೈರಾಗಿ’ ಚಿತ್ರೀಕರಣ ಉತ್ತಮ ಅನುಭವ ನನಗಾಯಿತು ಎಂದು ಶಿವರಾಜಕುಮಾರ್ ಹೇಳಿದ್ದಾರೆ .

ಈ ಪ್ರಾಜೆಕ್ಟ್ ನನಗೆ ತೃಪ್ತಿ ನೀಡಿದೆ ಎಂದು ಹೇಳಿರುವ ಶಿವರಾಜ್ ಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗುರುಕಶ್ಯಪ್ ಅದ್ಭುತವಾಗಿ ಅಸಮಾನ್ಯವಾದ ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಒಳ್ಳೆಯ ಹೈಪ್ ಸೃಷ್ಟಿಸಿದೆ.

18 ತಿಂಗಳಿಂದ ನಡೆಯುತ್ತಿದ್ದ ಶೂಟಿಂಗ್ ಮುಗಿದಿದ್ದು ಜುಲೈ 1 ರಂದು ರಿಲೀಸ್ ಆಗುತ್ತಿದೆ, ಶಿವರಾಜಕುಮಾರ್ ಅವರನ್ನು ಪರಿಚಯಿಸಿದ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರಿಗೆ ವಿಜಯ್ ಮಿಲ್ಟನ್ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

ಧನಂಜಯ್, ಪೃಥ್ವಿ ಅಂಬರ್ ಮತ್ತು ಯಶ ಶಿವಕುಮಾರ್ ಸೇರಿದಂತೆ ಇಡೀ ಚಿತ್ರತಂಡವು ಶಿವಣ್ಣನ ಜೊತೆ ತೆರೆ ಹಂಚಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. “ಬೈರಾಗಿಯು ದೊಡ್ಡ ಸಾಮರ್ಥ್ಯ ಹೊಂದಿರುವ ಸರಳ ವ್ಯಕ್ತಿಯ ಕಥೆಯಾಗಿದೆ. ಪ್ರೇಕ್ಷಕರು ಕುಟುಂಬ ಸಮೇತವಾಗಿ ಬಂದು ಸಿನಿಮಾ ನೋಡಿ ಆನಂದಿಸಬಹುದಾಗಿದೆ.

ಶಿವರಾಜಕುಮಾರ್ ಅವರ ಅಭಿಮಾನಿಯಾಗಿರುವ ನಿರ್ಮಾಪಕ ಕೃಷ್ಣ ಸಾರ್ಥಕ್ ಸಿನಿಮಾ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದಾರೆ. ನಾವು ಕರ್ನಾಟಕದಾದ್ಯಂತ ಸುಮಾರು 350 ಸ್ಕ್ರೀನ್‌ಗಳಲ್ಲಿ ಬೈರಾಗಿಯನ್ನು ರಿಲೀಸ್ ಮಾಡಲು ಯೋಜಿಸುತ್ತಿದ್ದೇವೆ. ಶಿವಣ್ಣ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನ ಸಂಗಮ ಥಿಯೇಟರ್‌ನಲ್ಲಿ ಸೆಂಚುರಿ ಸ್ಟಾರ್‌ನ 60 ಅಡಿ ಕಟ್‌ಔಟ್‌ ಮಾಡುತ್ತಿದ್ದೇವೆ.

ಈ ನಡುವೆ ಶಿವಣ್ಣ ಅಭಿಮಾನಿಗಳಿಂದ ಮಧ್ಯರಾತ್ರಿ ಶೋ ನಡೆಸಬೇಕೆಂಬ ಬೇಡಿಕೆಯೂ ಇದೆ. ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ" ಎಂದು ಕೃಷ್ಣ ಸಾರ್ಥಕ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com