'ಫ್ಯಾಮಿಲಿ ಪ್ಯಾಕ್' ಪುನೀತ್ ರಾಜ್ ಕುಮಾರ್ ಅವರ ಫೇವರಿಟ್ ಪ್ರಾಜೆಕ್ಟ್ ಆಗಿತ್ತು, ಅವರ ನಿರೀಕ್ಷೆ ಸುಳ್ಳಾಗಲಿಲ್ಲ: ನಟ ಲಿಖಿತ್ ಶೆಟ್ಟಿ
ಸಿನಿಮಾ ಎಷ್ಟು ಕಾಸು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ ಚಿತ್ರದ ಸಹನಿರ್ಮಾಪಕರೂ ಆಗಿರುವ ಲಿಖಿತ್ ಶೆಟ್ಟಿ, ಲಾಭಕ್ಕೆ ಸಂಬಂಧಿಸಿದಂತೆ ಈ ಒಂದು ವಿವರ ಮಾತ್ರ ಬಿಚ್ಚಿಟ್ಟರು.
Published: 01st March 2022 03:06 PM | Last Updated: 01st March 2022 03:06 PM | A+A A-

ಸಿನಿಮಾ ಪೋಸ್ಟರ್
- ಹರ್ಷವರ್ಧನ್ ಸುಳ್ಯ
ಅಮೆಜಾನ್ ಪ್ರೈಮ್ ನಲ್ಲಿ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ನಿರ್ದೇಶಕ ಅರ್ಜುನ್ ಕುಮಾರ್ ಮತ್ತು ನಾಯಕ ಲಿಖಿತ್ ಶೆಟ್ಟಿ ಜೋಡಿಯ ಸಿನಿಮಾ 'ಫ್ಯಾಮಿಲಿ ಪ್ಯಾಕ್' ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು. ಇದಕ್ಕೂ ಮುನ್ನ ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಬಂದಿದ್ದ 'ಸಂಕಷ್ಟಕರ ಗಣಪತಿ' ಸಿನಿಮಾ ಕೂಡಾ ಜನಮೆಚ್ಚುಗೆ ಪಡೆದಿತ್ತು. ಮುಂದಿನ ಸಿನಿಮಾ ಕೂಡಾ ಲಿಖಿತ್- ಅರ್ಜುನ್ ಕುಮಾರ್ ಕಾಂಬಿನೇಷನ್ನಿನಲ್ಲಿ ಮೂಡಿಬರಲಿದೆ ಎನ್ನುವ ಸೂಚನೆ ದೊರೆತಿದೆ.
ಇದನ್ನೂ ಓದಿ: 'ಸಲಗ' ಬಳಿಕ ಮತ್ತೊಂದು ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್ ಕಟ್
ಈ ಸಂದರ್ಭದಲ್ಲಿ 'ಫ್ಯಾಮಿಲಿ ಪ್ಯಾಕ್' ನಿರ್ಮಾಪಕರಾದ ಪುನೀತ್ ರಾಜ್ ಕುಮಾರ್ ಅವರನ್ನು ಚಿತ್ರತಂಡ ಸ್ಮರಿಸಿದೆ. ಚಿತ್ರೀಕರಣದುದ್ದಕ್ಕೂ ಪುನೀತ್ ಅವರ ಪ್ರೋತ್ಸಾಹವನ್ನು ಚಿತ್ರತಂಡ ನೆನಪು ಮಾಡಿಕೊಂಡಿತು. ಈ ಬಗ್ಗೆ ಮಾತನಾಡಿದ ಲಿಖಿತ್ ಶೆಟ್ಟಿ 'ಫ್ಯಾಮಿಲಿ ಪ್ಯಾಕ್' ಪುನೀತ್ ಅವರ ಫೇವರಿಟ್ ಪ್ರಾಜೆಕ್ಟ್ ಆಗಿತ್ತು. ಈ ಸಿನಿಮಾ ಹಿಟ್ ಆಗುವುದಾಗಿ ಅವರಿಗೆ ನಂಬಿಕೆಯಿತ್ತು' ಎಂದರು.
ಇದನ್ನೂ ಓದಿ: ಸಿಕ್ಸ್ ಪ್ಯಾಕ್ ಸಿನಿಮಾಗಳ ನಡುವೆ ಹೊಟ್ಟೆ ತುಂಬಾ ನಗಿಸುವ ಅತೃಪ್ತ ಆತ್ಮ: ಫ್ಯಾಮಿಲಿ ಪ್ಯಾಕ್ ಚಿತ್ರವಿಮರ್ಶೆ
ಸಿನಿಮಾ ಎಷ್ಟು ಕಾಸು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ ಚಿತ್ರದ ಸಹನಿರ್ಮಾಪಕರೂ ಆಗಿರುವ ಲಿಖಿತ್ ಶೆಟ್ಟಿ, ಲಾಭಕ್ಕೆ ಸಂಬಂಧಿಸಿದಂತೆ ಒಂದು ವಿವರ ಮಾತ್ರ ಬಿಚ್ಚಿಟ್ಟರು. ಹಾಕಿದ ಬಂಡವಾಳಕ್ಕಿಂತ ಮೂರು ಪಟ್ಟು ಹೆಚ್ಚು ಲಾಭ ಬಂದಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಮಿಲಿ ಪ್ರಧಾನ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಬಿಡುಗಡೆ
ಕಾರ್ಯಕ್ರಮದಲ್ಲಿ ಹಾಜರಿದ್ದ ನಟಿ ಶರ್ಮಿತಾ ಗೌಡ ಚಿತ್ರೀಕರಣ ಅನುಭವ ಹಂಚಿಕೊಂಡರು. ನಟ ಸಿಹಿ ಕಹಿ ಚಂದ್ರು ಸಿನಿಮಾ OTTಯಲ್ಲಿ ಬಿಡುಗಡೆಯಾಗುವುದಾಗಿ ತಿಳಿದಾಗ ತುಂಬಾ ಆತಂಕವಾಗಿತ್ತು. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆ. ಮುಂದಿನ ದಿನಗಳಲ್ಲಿ ಕಲಾವಿದರಾಗಿ ಹೊಸ ಬದಲಾವಣೆಗೆ ಒಗ್ಗಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಪ್ರೀತಿಯ ಹೃದಯ ಇರುವಲ್ಲಿ ಸುಂದರ ಕುಟುಂಬ: 'ಫ್ಯಾಮಿಲಿ ಪ್ಯಾಕ್' ನಿರ್ದೇಶಕ ಅರ್ಜುನ್ ಕುಮಾರ್