ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರದಲ್ಲಿ ಸುಕೃತಾ ವಾಗ್ಲೆ ಪ್ರಮುಖ ಪಾತ್ರ
ಮಹಿಳಾ ಪ್ರಧಾನ ಚಿತ್ರಗಳಲ್ಲಿ ಸಾಮಾನ್ಯವಾಗಿ ಅಭಿನಯಿಸುವ ಸುಕೃತಾ ವಾಗ್ಲೆ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರಕ್ಕೆ ಬಣ್ಣ ಬಚ್ಚಲು ಸಜ್ಜಾಗಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರಕ್ಕೆ ಉದಯ್ ಕೆ ಮೆಹ್ತ ಬಂಡವಾಳ ಹೂಡುತ್ತಿದ್ದು ಸುಕೃತಾ ವಾಗ್ಲೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Published: 01st March 2022 02:11 PM | Last Updated: 01st March 2022 02:56 PM | A+A A-

ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ನಟಿ ಸುಕೃತಾ ವಾಗ್ಲೆ(ಸಂಗ್ರಹ ಚಿತ್ರ)
ಮಹಿಳಾ ಪ್ರಧಾನ ಚಿತ್ರಗಳಲ್ಲಿ ಸಾಮಾನ್ಯವಾಗಿ ಅಭಿನಯಿಸುವ ಸುಕೃತಾ ವಾಗ್ಲೆ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರಕ್ಕೆ ಬಣ್ಣ ಬಚ್ಚಲು ಸಜ್ಜಾಗಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಚಿತ್ರಕ್ಕೆ ಉದಯ್ ಕೆ ಮೆಹ್ತ ಬಂಡವಾಳ ಹೂಡುತ್ತಿದ್ದು ಸುಕೃತಾ ವಾಗ್ಲೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸುಕೃತ ಅವರಿಗೆ ಮಾರ್ಟಿನ್ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ ಖುಷಿ ಮೂಡಿಸಿದೆ. ನಿರ್ಮಾಪಕ ಉದಯ್ ಮೆಹ್ತ ಅವರನ್ನು ಚಿತ್ರರಂಗದ ಆರಂಭದ ದಿನಗಳಿಂದಲೂ ತಾನು ಬಲ್ಲವನಾಗಿದ್ದು ಅವರ ಹೋಂ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎನ್ನುತ್ತಾರೆ.
ಉದಯ್ ಸರ್ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ, ಕಲಾವಿದರಿಗೆ ಉತ್ತಮ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಮಾರ್ಟಿನ್ ಚಿತ್ರದಲ್ಲಿ ಭಿನ್ನ ಪಾತ್ರವಿದೆ. ನಾನು ಕೇಳದಿರುವ ಪಾತ್ರ ಸಿಕ್ಕಿದೆ. ಧ್ರುವ ಬಗ್ಗೆ ನನಗೆ ಹಿಂದಿನಿಂದಲೂ ಗೊತ್ತು, ನನ್ನ ಉತ್ತಮ ಸ್ನೇಹಿತ, ಅವರ ಜೊತೆ ಕೆಲಸ ಮಾಡುತ್ತಿರುವುದು ಖುಷಿಯನ್ನುಂಟುಮಾಡಿದೆ. ಎ ಪಿ ಅರ್ಜುನ್ ಅವರ ನಿರ್ದೇಶನ, ಸತ್ಯ ಹೆಗ್ಡೆಯವರ ಛಾಯಾಗ್ರಹಣವಿದೆ. ಮಾರ್ಟಿನ್ ನನ್ನ ಮೊದಲ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರ ಎಂದರು.
ಇದನ್ನೂ ಓದಿ: ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ
ಮಾರ್ಟಿನ್ ಚಿತ್ರದ ಇತ್ತೀಚಿನ ಶೆಡ್ಯೂಲ್ ನ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಸುಕೃತಾ ಭಾಗಿಯಾಗಿದ್ದು ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿತ್ತು. ಪಾತ್ರದ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ, ಆದರೆ ಪಾತ್ರದಲ್ಲಿ ಹೆಚ್ಚು ತೂಕವಿದೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಮಹಿಳಾ ಕಲಾವಿದರಿಗೆ ಹೆಚ್ಚು ಅವಕಾಶವಿರುವುದಿಲ್ಲ, ಆದರೆ ಇದು ಭಿನ್ನವಾಗಿದೆ ಎನ್ನುತ್ತಾರೆ.
ಇನ್ನು ಸುಕೃತಾ ಗಪ್ ಚುಪ್ ಚಿತ್ರದ ಶೂಟಿಂಗ್ ನ್ನು ಸಹ ಮುಗಿಸಿದ್ದಾರೆ. ಅದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ಜೊತೆಜೊತೆಗೆ ಕಾನೂನು ಪದವಿ ಶಿಕ್ಷಣವನ್ನು ಸಹ ಸುಕೃತಾ ಗಳಿಸುತ್ತಿದ್ದಾರೆ.