'ಭೀಮ' ಕೆಣಕದಿದ್ರೆ 'ಕ್ಷೇಮ' ಎನ್ನುತ್ತಿದ್ದಾರೆ ದುನಿಯಾ ವಿಜಯ್!
ಸಲಗ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ ನಟ 'ದುನಿಯಾ' ವಿಜಯ್, ಈಗ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಾಶಿವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದಾರೆ
Published: 02nd March 2022 09:24 AM | Last Updated: 02nd March 2022 01:11 PM | A+A A-

ದುನಿಯಾ ವಿಜಯ್
ಸಲಗ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ ನಟ 'ದುನಿಯಾ' ವಿಜಯ್, ಈಗ ಎರಡನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಮಹಾಶಿವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದಾರೆ. ಸಿನಿಮಾಗೆ 'ಭೀಮ' ಎಂದು ಟೈಟಲ್ ಇಡಲಾಗಿದೆ. ಜೊತೆಗೆ 'ಕೆಣಕದಿದ್ರೆ ಕ್ಷೇಮ' ಅನ್ನೋ ಟ್ಯಾಗ್ ಲೈನ್ ಕೂಡ ಇದೆ.
'ಭೀಮ' ಸಿನಿಮಾವನ್ನು ದುನಿಯಾ ವಿಜಯ್ಅವರೇ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ನೈಜ ಘಟನೆಯನ್ನು ಆಧರಿಸಿ ವಿಜಿ ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ಯುವ ಜನಾಂಗದ ಸಮಸ್ಯೆ, ಕುಟುಂಬದಲ್ಲಿ ಉಂಟಾಗುವ ತೊಡಕುಗಳು, ಸಾಮಾಜಿಕವಾಗಿ ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್ ಇವುಗಳನ್ನೆಲ್ಲಾ ಇಟ್ಟುಕೊಂಡು ಕಥೆ ಬರೆದಿದ್ದಾರಂತೆ.
'ನಾನು ಯಾವಾಗ ಕಥೆ ಮಾಡಿದರೂ ಅದರಲ್ಲೊಂದು ಸಾಮಾಜಿಕ ವಿಷಯದ ಚರ್ಚೆ ಇರುತ್ತದೆ. ಸಲಗದಲ್ಲಿಯೂ ಅಂತಹದ್ದೊಂದು ಪ್ರಯತ್ನ ಮಾಡಿದ್ದರು. ಈ ಬಾರಿ ಸಮಾಜದ ಪ್ರಮುಖ ಸಮಸ್ಯೆಯನ್ನು ಇಟ್ಟುಕೊಂಡು ಕಥೆ ಬರೆದಿದ್ದಾರಂತೆ.
ಇದನ್ನೂ ಓದಿ: 'ಸಲಗ' ಬಳಿಕ ಮತ್ತೊಂದು ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್ ಕಟ್
'ಸಲಗ' ಸಿನಿಮಾದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಭೀಮ ಚಿತ್ರದಲ್ಲಿ ಮುಂದುವರಿಯಲಿದೆ. ಭೀಮ ಸಿನಿಮಾಗೆ ಸಂಗೀತ ನೀಡಿರುವುದು ಚರಣ್ ರಾಜ್. 'ಸಲಗ'ದಲ್ಲಿ ತಮ್ಮ ಅದ್ಭುತ ಕ್ಯಾಮೆರಾ ವರ್ಕ್ ಮೂಲಕ ಗಮನ ಸೆಳೆದಿದ್ದ ಶಿವು ಸೇನಾ ಸಿನಿಮಾಟೋಗ್ರಫಿ, ಪಂಚಿಂಗ್ ಸಂಭಾಷಣೆಗಳ ಮಾಸ್ತಿಯವರ ಬರವಣಿಗೆ, ದೀಪು ಎಸ್. ಕುಮಾರ್ ಸಂಕಲನ, ರಾಜನ್ ಅವರ ಎಫೆಕ್ಟ್ಸ್ ಈ ಚಿತ್ರಕ್ಕೂ ಇರಲಿದೆ.
ಚಿತ್ರದ ಕಥೆ ಮತ್ತು ವಿಜಯ್ ಕುಮಾರ್ ಅವರ ನಿರ್ದೇಶನವೇ ನನ್ನನ್ನು ಈ ಪ್ರಾಜೆಕ್ಟ್ ಗೆ ಆಕರ್ಷಿಸಿತು ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ, ಜಗದೀಶ್ ಗೌಡ ಇದರ ಸಹ ನಿರ್ಮಾಪಕರಾಗಿದ್ದಾರೆ.