ವಿದೇಶದಲ್ಲಿ ಪತಿ, ಸ್ವದೇಶದಲ್ಲಿ ಪತ್ನಿ ಲಾಕ್: 'ಮೇಡ್ ಇನ್ ಚೈನಾ' ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್
'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾ ಖ್ಯಾತಿಯ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಡ್ ಇನ್ ಚೈನಾ ಸಿನಿಮಾವನ್ನು ಪ್ರೀತಂ ತೆಗ್ಗಿನಮನೆ ನಿರ್ದೇಶಿಸಿದ್ದಾರೆ.
Published: 02nd March 2022 02:24 PM | Last Updated: 02nd March 2022 02:38 PM | A+A A-

ಸಿನಿಮಾ ಪೋಸ್ಟರ್
'ಇಕ್ಕಟ್', 'ಬಡವ ರಾಸ್ಕಲ್' ಸಿನಿಮಾ ಖ್ಯಾತಿಯ ನಾಗಭೂಷಣ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಟನೆಯ 'ಮೇಡ್ ಇನ್ ಚೈನಾ' ಸಿನಿಮಾದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಮಾರ್ಚ್ 11ಕ್ಕೆ ರಿಲೀಸ್ ಆಗುತ್ತಿದೆ.
ಈ ಮೊದಲು ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್ ಇನ್ ಚೈನಾ’ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ನಿರ್ದೇಶನದ ಜೊತೆಗೆ ಛಾಯಾಗ್ರಹಣ, ವಿಎಫ್ಎಕ್ಸ್, ಸಂಕಲನದ ಜವಾಬ್ದಾರಿಯನ್ನೂ ಅವರೇ ನಿರ್ವಹಿಸಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ಕೂರ್ಗ್ ಕೀ 'ನಿಶಾನ್': ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿರುವ ಕರುನಾಡ ಕಲಾವಿದ ನಿಶಾನ್ ನಾಣಯ್ಯ
ಕನ್ನಡದ ಮೊದಲ ವರ್ಚುವಲ್ ಸಿನಿಮಾ ಎನ್ನುವ ಹೆಸರಿಗೆ 'ಮೇಡ್ ಇನ್ ಚೈನಾ' ಪಾತ್ರವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಪತಿ ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿ ಚಡಪಡಿಸುತ್ತಾಳೆ. ಈ ಘಟನೆಯ ಸುತ್ತ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ.
ಇದನ್ನೂ ಓದಿ: ಇತರೆ ಪ್ರಾಂತ್ಯಗಳ ಕನ್ನಡದ ಗೇಲಿ ನಿಲ್ಲಬೇಕು: ಸಿನಿಮಾ ಭಾಷೆಯ ಕುರಿತು ಗಿರೀಶ್ ಕಾಸರವಳ್ಳಿ ಪಾಠ
ಚಿತ್ರದಲ್ಲಿ ಗೌರವ್ ಶೆಟ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಅರುಣಾ ಬಾಲರಾಜ್, ರವಿ ಭಟ್ ಕೂಡ ನಟಿಸಿದ್ದಾರೆ. ನಿಶ್ಚಲ್ ವಿ ಹಾಗೂ ಪ್ರೀತಮ್ ತೆಗ್ಗಿನಮನೆ ಸಿನಿಮಾಗೆ ಚಿತ್ರಕಥೆ ಬರೆದಿದ್ದಾರೆ. ವಿವಾನ್ ರಾಧಾಕೃಷ್ಣ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಎನ್.ಕೆ. ಸ್ಟುಡಿಯೋಸ್ ಬ್ಯಾನರ್ನಡಿ ನಂದಕಿಶೋರ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್ ನಡಿ ಈ ಸಿನಿಮಾವನ್ನು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಪ್ರಸ್ತುತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ