ಫಿಲ್ಮ್ ಅಕಾಡೆಮಿಯಿಂದ ಪ್ರಮಾದ ಆಗಿಲ್ಲ: ಸುನೀಲ್ ಪುರಾಣಿಕ್
“ಬೊಮ್ಮಾಯಿ ಮರೆತ ಫಿಲ್ಮ್ ಅಕಾಡೆಮಿಗೆ ಯಡಿಯೂರಪ್ಪ ಸಿಎಂ” ಎಂಬ ಶಿರ್ಷಿಕೆಯಲ್ಲಿ ಪ್ರಕಟಿಸಿದ್ದ ಸುದ್ದಿಗೆ ಕರ್ನಾಟಕ ಚಲನಚಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರತಿಕ್ರಿಯಿಸಿದ್ದು ಈ ದಿಶೆಯಲ್ಲಿ ಅಕಾಡೆಮಿಯಿಂದ ಪ್ರಮಾದವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
Published: 03rd March 2022 01:15 AM | Last Updated: 03rd March 2022 12:59 PM | A+A A-

ಫಿಲ್ಮ್ ಅಕಾಡೆಮಿ ಅಧ್ಯತ್ರ ಸುನಿಲ್ ಪುರಾಣಿಕ್
ಬೆಂಗಳೂರು: “ಬೊಮ್ಮಾಯಿ ಮರೆತ ಫಿಲ್ಮ್ ಅಕಾಡೆಮಿಗೆ ಯಡಿಯೂರಪ್ಪ ಸಿಎಂ” ಎಂಬ ಶಿರ್ಷಿಕೆಯಲ್ಲಿ ಪ್ರಕಟಿಸಿದ್ದ ಸುದ್ದಿಗೆ ಕರ್ನಾಟಕ ಚಲನಚಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪ್ರತಿಕ್ರಿಯಿಸಿದ್ದು ಈ ದಿಶೆಯಲ್ಲಿ ಅಕಾಡೆಮಿಯಿಂದ ಪ್ರಮಾದವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಅಕಾಡೆಮಿಯಿಂದ ಹೊಸ ವೆಬ್ ಸೈಟ್ ಆಗಿದ್ದು ಅದರಲ್ಲಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರೇ ಇರುವ ಚಿತ್ರಗಳಿವೆ ಎಂದ ಅವರು ಈ ಸಂಬಂಧಿತ ಲಿಂಕ್ (https://www.kcainfo.org/) ಜೊತೆಗೆ ಚಿತ್ರಗಳನ್ನು ಕಳಿಸಿದ್ದಾರೆ. ಅವರು ಕಳಿಸಿರುವ ಚಿತ್ರಗಳು ಮುಂದಿವೆ.
ಗೂಗಲ್ ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಎಂದು ಯಾರೇ ಸರ್ಚ್ ಮಾಡಿದರೂ https://kcainfo.in/kn/ , https://kcainfo.in/en/ ಲಿಂಕಿನ ವೆಬ್ ಸೈಟ್ ತೆರೆದುಕೊಳ್ಳುತ್ತವೆ. ಹೀಗಿರುವಾಗ ಹಳೆಯ ವೆಬ್ ಸೈಟ್ ಅನ್ನು ಡಿ ಆಕ್ಟಿವೇಟ್ ಮಾಡಿ ಅದರಲ್ಲಿರುವ ಚಿತ್ರಗಳು ಮತ್ತು ವಿವರಗಳನ್ನು ಹೊಸ ವೆಬ್ ಸೈಟಿನ ಆರ್ಕೈವ್ ಲಿಂಕಿನಲ್ಲಿ ಇಡಬಹುದಾಗಿತ್ತು. ಹೀಗೆ ಮಾಡದೇ ಇದ್ದಾಗ ಅಕಾಡೆಮಿ ಹೆಸರಿನ ಮೂಲಕ ವೆಬ್ ಸೈಟ್ ಹುಡುಕುವವರಿಗೆ ಸಹಜವಾಗಿಯೇ ಗೊಂದಲವಾಗುತ್ತದೆ. ಇದು ಈ ವರದಿಗಾರನಿಗಷ್ಟೇ ಅಲ್ಲ; ಸಾಕಷ್ಟು ಮಂದಿ ಈ ರೀತಿ ಗೊಂದಲಕ್ಕೆ ಒಳಗಾಗಿದ್ದಾರೆ.
ಆದ್ದರಿಂದ ಇನ್ನೂ ಮುಂದಾದರೂ ಅಕಾಡೆಮಿ ಹಳೆ ವೆಬ್ ಸೈಟಿನ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಂಡು ಆರ್ಕೈವ್ ವಿಭಾಗದಲ್ಲಿ ಇರಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಸಿನೆಮಾಸಕ್ತರಿಗೆ ಗೊಂದಲವಾಗುತ್ತದೆ.