'ವಿಕ್ರಾಂತ್ ರೋಣ' ಮತ್ತೊಂದು ದಾಖಲೆ: ಇಂಗ್ಲೀಷ್ ವರ್ಷನ್ ಗೆ ಕಿಚ್ಚ ಸುದೀಪ್ ಡಬ್ಬಿಂಗ್!
ಸ್ಯಾಂಡಲ್ವುಡ್ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’.
Published: 03rd March 2022 10:02 AM | Last Updated: 03rd March 2022 01:01 PM | A+A A-

ಸುದೀಪ್
ಸ್ಯಾಂಡಲ್ವುಡ್ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’.
ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಬಗ್ಗೆ ಮತ್ತೊಂದು ಅಪ್ ಡೇಟ್ ಸಿಕ್ಕಿದೆ, ಮಾರ್ಚ್ 2 ರಂದು ನಿರ್ದೇಶಕ ಅನೂಪ್ ಭಂಡಾರಿ ಅವರ ಜನ್ಮದಿನ. ಹೀಗಾಗಿ, ತಮ್ಮ ಹುಟ್ಟುಹಬ್ಬದಂದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಅನೂಪ್ ಭಂಡಾರಿ ದೊಡ್ಡ ಸರ್ಪ್ರೈಸ್ ಕೊಟ್ಟಿದ್ದಾರೆ.
‘ವಿಕ್ರಾಂತ್ ರೋಣ’ ಸಿನಿಮಾ ಇಂಗ್ಲೀಷ್ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ‘ವಿಕ್ರಾಂತ್ ರೋಣ’ ಚಿತ್ರದ ಇಂಗ್ಲೀಷ್ ವರ್ಷನ್ಗೆ ಕಿಚ್ಚ ಸುದೀಪ್ ಅವರೇ ಡಬ್ಬಿಂಗ್ ಮಾಡಿದ್ದಾರೆ. ಇಂಗ್ಲೀಷ್ ಭಾಷೆಯ ಚಿತ್ರಕ್ಕೆ ಡಬ್ಬಿಂಗ್ ಮಾಡಿದ ಮೊದಲ ಕನ್ನಡದ ಸೂಪರ್ ಸ್ಟಾರ್ ಎಂಬ ಖ್ಯಾತಿಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ. ಆ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ ಸುದೀಪ್.
ವಿಕ್ರಾಂತ್ ರೋಣ ಸಿನಿಮಾ ಇಂಗ್ಲೀಷ್ನಲ್ಲೂ ತೆರೆಗೆ ಬರಲಿದೆ. ಇಂಗ್ಲೀಷ್ ವರ್ಷನ್ಗೆ ಕಿಚ್ಚ ಸುದೀಪ್ ಸರ್ ಡಬ್ಬಿಂಗ್ ಕಂಪ್ಲೀಟ್ ಮಾಡಿದ್ದಾರೆ. ಇಂಗ್ಲೀಷ್ನಲ್ಲಿ ಪೂರ್ಣ ಪ್ರಮಾಣದ ಕಮರ್ಷಿಯಲ್ ಚಿತ್ರಕ್ಕೆ ಡಬ್ ಮಾಡಿದ ಕನ್ನಡದ ಮೊದಲ ಸೂಪರ್ ಸ್ಟಾರ್ ಹಾಗೂ ಭಾರತದ ಕೆಲವೇ ವ್ಯಕ್ತಿಗಳಲ್ಲಿ ಕಿಚ್ಚ ಸುದೀಪ್ ಒಬ್ಬರು ಎಂದು ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ. ಜೊತೆಗೆ, ‘ವಿಕ್ರಾಂತ್ ರೋಣ’ ಸಿನಿಮಾದ ಇಂಗ್ಲೀಷ್ ವರ್ಷನ್ಗೆ ಕಿಚ್ಚ ಸುದೀಪ್ ಡಬ್ಬಿಂಗ್ ಮಾಡಿರುವ ವಿಡಿಯೋ ಹಾಗೂ ಚಿತ್ರದ ಸಣ್ಣ ತುಣುಕನ್ನೂ ನಿರ್ದೇಶಕ ಅನೂಪ್ ಭಂಡಾರಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಸಿನಿಮಾದ 3D ವರ್ಷನ್ ಸಖತ್ತಾಗಿದೆ: ಚಿತ್ರತಂಡಕ್ಕೆ ಕಿಚ್ಚ ಸುದೀಪ್ ಪ್ರಶಂಸೆ
ಇಂಗ್ಲೀಷ್ ಭಾಷೆಯಲ್ಲಿ ಸುದೀಪ್ ಖಡಕ್ ಡೈಲಾಗ್ಸ್ ಹೊಡೆದಿರುವುದರಿಂದ ಮತ್ತು ಹಾಲಿವುಡ್ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದರಿಂದ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ. ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂದನ್ ರಾವ್, ವಾಸುಕಿ ವೈಭವ್ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಂಡಿದ್ದಾರೆ.
ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ವಿಕ್ರಾಂತ್ ರೋಣ’ ಸಿನಿಮಾ ಕನ್ನಡ, ಇಂಗ್ಲೀಷ್ ಸೇರಿದಂತೆ 14 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. 3D ವರ್ಷನ್ನಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ತೆರೆಕಾಣಲಿದೆ. ಝೀ ಸ್ಟುಡಿಯೋಸ್ ಪ್ರಸ್ತುಪ ಪಡಿಸಿರುವ ಬಹುಭಾಷಾ ಸಾಹಸ-ಸಾಹಸವಾಗಿದ್ದು, 55 ದೇಶಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.