'ಪತ್ನಿಯಷ್ಟೇ ಮುದ್ದಾದ ಮಗಳು ಹುಟ್ಟಿದ್ದಾಳೆ', ಹೆಣ್ಣು ಮಗು ಜನನದ ಸಂತಸ ಹಂಚಿಕೊಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ
ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಈ ಸಂತಸದ ವಿಷಯವನ್ನು ನಿರ್ದೇಶಕ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
Published: 04th March 2022 11:06 AM | Last Updated: 04th March 2022 01:41 PM | A+A A-

ರಿಷಬ್ ಶೆಟ್ಟಿ -ಪ್ರಗತಿ ಶೆಟ್ಟಿ
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಮತ್ತು ಪ್ರಗತಿ ದಂಪತಿಗೆ ಹೆಣ್ಣು ಮಗುವಿನ ಜನನವಾಗಿದೆ. ಈ ಸಂತಸದ ವಿಷಯವನ್ನು ನಿರ್ದೇಶಕ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ ತಾಯಿ ಮಗು ಆರೋಗ್ಯವಾಗಿದ್ದಾರೆ pic.twitter.com/gvEtOJeRiX
— Rishab Shetty (@shetty_rishab) March 4, 2022
ದಂಪತಿಗೆ ಈಗಾಗಲೇ ರಣ್ ವಿತ್ ಶೆಟ್ಟಿ ಎಂಬ ಗಂಡು ಮಗುವಿದ್ದು ಇದು ಅವರ ಸಂಸಾರದಲ್ಲಿ ಎರಡನೇ ಮಗುವಾಗಿದೆ. ಹೊಸ ವರ್ಷದ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಇನ್ನೊಂದು ಸದಸ್ಯನ ಸೇರ್ಪಡೆಯಾಗಲಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದರು. ತುಂಬು ಗರ್ಭಿಣಿಯ ಫೋಟೋಗಳು, ಪ್ರಗತಿಯವರ ಸೀಮಂತ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು.
ರಿಷಬ್ ಶೆಟ್ಟಿ ನಿರ್ಮಿಸಿದ 'ಪೆದ್ರೊ' ಸಿನಿಮಾ ಈಗ ಆರಂಭವಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿಲ್ಲ ಎಂದು ಬಹಿರಂಗವಾಗಿ ಬೇಸರ ಹೊರಹಾಕಿದ್ದರು. 'ಪೆದ್ರೊ' ಚಿತ್ರವನ್ನು ನಟೇಶ್ ಹೆಗ್ಡೆ ನಿರ್ದೇಶನ ಮಾಡಿದ್ದು, ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಈಗಾಗಲೇ ಭಾಗಿಯಾಗಿದೆ. ಆದರೆ, ನಮ್ಮ ನಾಡಿನಲ್ಲೇ ಬೆಲೆ ಕೊಟ್ಟಿಲ್ಲ ಎಂದು ಬೇಸರ ಹೊರಹಾಕಿದ್ದರು.
ಇತ್ತ ರಿಷಬ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ಗರುಡ ಗಮನ ವೃಷಭ ವಾಹನ ಹಿಟ್ ಆಗಿದೆ. 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ', 'ಆಂಟಗೋನಿ ಶೆಟ್ಟಿ', 'ಕಾಂತರ' ಸಿನಿಮಾಗಳನ್ನು ಮಾಡುತ್ತಿದ್ದಾರೆ.