ಫ್ರೆಂಡ್ ಜೊತೆ ಕೆಲಸ ಮಾಡುವಾಗ 'ಕಂಫರ್ಟ್ ಝೋನ್' ಇರುತ್ತೆ: 'ಹಿರಣ್ಯ' ತಂಡ ಸೇರಿದ ದಿವ್ಯಾ ಸುರೇಶ್!
ರಾಜವರ್ದನ್ ಮತ್ತು ನಾನು ಒಳ್ಳೆಯ ಸ್ನೇಹಿತರು. ನಾವು ಯಾವಾಗಲೂ ಪ್ರಾಜೆಕ್ಟ್ಗಾಗಿ ಟೀಮ್ ಆಗಿ ಕೆಲಸ ಮಾಡಲು ಬಯಸುತ್ತೇವೆ. ಅದು ಅಂತಿಮವಾಗಿ ಹಿರಣ್ಯ ಮೂಲಕ ಸಾಕಾರವಾಗಿದೆ.
Published: 05th March 2022 11:39 AM | Last Updated: 05th March 2022 01:11 PM | A+A A-

ದಿವ್ಯಾ ಸುರೇಶ್
ಬಿಗ್ ಬಾಸ್ ಕನ್ನಡ ಸೀಸನ್ 8 ರ ನಂತರ ಜನಪ್ರಿಯತೆಯನ್ನು ಗಳಿಸಿದ ದಿವ್ಯಾ ಸುರೇಶ್, ತಮ್ಮ ಮುಂದಿನ ಪ್ರಾಜೆಕ್ಟ್ ಗೆ ಸಹಿ ಹಾಕುವ ಮೊದಲು ಸ್ವಲ್ಪ ಸಮಯ ಕಾದು ಕುಳಿತಿದ್ದರು.
ರೌಡಿ ಬೇಬಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟಿ ಈಗ ರಾಜವರ್ದನ್ ಅಭಿನಯದ ಹಿರಣ್ಯ ಚಿತ್ರದ ಭಾಗವಾಗಲಿದ್ದಾರೆ.
ರಾಜವರ್ದನ್ ಮತ್ತು ನಾನು ಒಳ್ಳೆಯ ಸ್ನೇಹಿತರು. ನಾವು ಯಾವಾಗಲೂ ಪ್ರಾಜೆಕ್ಟ್ಗಾಗಿ ಟೀಮ್ ಆಗಿ ಕೆಲಸ ಮಾಡಲು ಬಯಸುತ್ತೇವೆ. ಅದು ಅಂತಿಮವಾಗಿ ಹಿರಣ್ಯ ಮೂಲಕ ಸಾಕಾರವಾಗಿದೆ.
ಸ್ನೇಹಿತನೊಂದಿಗೆ ಕೆಲಸ ಮಾಡುವಾಗ ಕಂಫರ್ಟ್ ಝೋನ್ ಇರುತ್ತದೆ, ಇದರಿಂದ, ವಿಶೇಷವಾಗಿ ಸೆಟ್ಗಳಲ್ಲಿ ಮತ್ತು ಕ್ಯಾಮೆರಾದ ಮುಂದೆ ಸಹಜವಾಗಿರಲು ನನಗೆ ಸಹಾಯ ಮಾಡುತ್ತದೆ ಎಂದು ದಿವ್ಯಾ ಸುರೇಶ್ ತಿಳಿಸಿದ್ದಾರೆ.
ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ಈಗಾಗಲೇ ರಿಹಾನಾ ಆಯ್ಕೆಯಾಗಿದ್ದಾರೆ, ಅವರ ಜೊತೆಗೆ ದಿವ್ಯಾ ಸುರೇಶ್ ಕೂಡ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಸ್ನೇಹಿತನಿಗಾಗಿ ಟೈಟಲ್ ಬಿಟ್ಟುಕೊಟ್ಟ ಧನಂಜಯ್: ರಾಜವರ್ಧನ್ ನಟನೆಯ 'ಹಿರಣ್ಯ'ಗೆ ರಿಹಾನಾ ನಾಯಕಿ!
ಪಾತ್ರದ ಬಗ್ಗೆ ಯಾವುದೇ ಮಾಹಿತಿ ನೀಡದಂತೆ ನನಗೆ ಸೂಚಿಸಲಾಗಿದೆ, ನಾನು ಮಾಡುತ್ತಿರುವ ಪಾತ್ರ ಪ್ರಮುಖವಾಗಿದ್ದು ವಿಶೇಷತೆಯಿಂದ ಕೂಡಿದೆ ಎಂದಷ್ಟೇ ಮಾತ್ರ ನಾನು ಈ ಸಮಯದಲ್ಲಿ ಹೇಳಲು ಸಾಧ್ಯ, ಈ ಸಿನಿಮಾ ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಪ್ರಮುಖ ಕಾರಣ ಇದರಲ್ಲಿ ನನ್ನ ನೃತ್ಯವಿದೆ ಎಂದು ಹೇಳಿದ್ದಾರೆ.
ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಅವರ ಬೆಂಬಲದೊಂದಿಗೆ, ಹಿರಣ್ಯ ಸಿನಿಮಾ ನಿರ್ಮಾಣವಾಗುತ್ತಿದೆ.
ಮಾರ್ಚ್ 9 ರಿಂದ ದಿವ್ಯಾ ಸುರೇಶ್ ಸೆಟ್ಗೆ ಸೇರ್ಪಡೆಯಾಗಲಿದ್ದಾರೆ. ಹಿರಣ್ಯ ಸಂಗೀತದ ಜವಾಬ್ದಾರಿಯನ್ನು ಜೂಡಾ ಸ್ಯಾಂಡಿ ನಿರ್ವಹಿಸಿದರೆ, ಯೋಗೇಶ್ವರನ್ ಸಿನಿಮಾಟೋಗ್ರಫಿ ನಿರ್ವಹಿಸಲಿದ್ದಾರೆ.