ಕಿರೀಟಿ ರೆಡ್ಡಿ ಚೊಚ್ಚಲ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಎಕ್ಸೈಟ್ ಆಗಿದ್ದೇನೆ: ಶ್ರೀಲೀಲಾ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದು, ಆ ಸಿನಿಮಾಗೆ 'ಮಾಯಾಬಜಾರ್' ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಚ್ 4ರಂದು ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
Published: 05th March 2022 11:22 AM | Last Updated: 05th March 2022 01:10 PM | A+A A-

ಶ್ರೀಲೀಲಾ
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದು, ಆ ಸಿನಿಮಾಗೆ 'ಮಾಯಾಬಜಾರ್' ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಮಾರ್ಚ್ 4ರಂದು ಚಿತ್ರಕ್ಕೆ ಅದ್ದೂರಿಯಾಗಿ ಮುಹೂರ್ತ ನೆರವೇರಿದೆ.
ವಿಶೇಷವೆಂದರೆ ಕಿರೀಟಿ ಹೀರೋ ಆಗಿರುವ ಮೊದಲ ಸಿನಿಮಾಕ್ಕೆ 'ಬಾಹುಬಲಿ', 'ಪುಷ್ಪ' ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ತೆಲುಗಿನಲ್ಲಿ 'ಈಗ', 'ಲೆಜೆಂಡ್', 'ಯುದ್ಧಂ ಶರಣಂ' ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಾಯಿ ಕೊರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.
ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಇಂಥದ್ದೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ದ್ವಿಭಾಷಾ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಆ ಬಗ್ಗೆ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಅಪ್ಪು ಜೊತೆಗಿನ ಮಧುರ ಕ್ಷಣಗಳನ್ನು ಹಂಚಿಕೊಂಡ ಜನಾರ್ದನ ರೆಡ್ಡಿ ಪುತ್ರ 'ಕಿರೀಟಿ'
ಇದೊಂದು ಸುಂದರ ಅನುಭವ, ಏಕೆಂದರೆ ನಾನು ಕೂಡ ಇದೇ ರೀತಿಯ ಪರಿಸ್ಥಿತಿ ಅನುಭವಿಸಿದ್ದೇನೆ, ಕಿರೀಟಿ ರೆಡ್ಡಿಗೆ ಈ ಚಿತ್ರ ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾನು ಬಲ್ಲೆ, ಚಿತ್ರದಲ್ಲಿ ಉತ್ತಮ ತಂತ್ರಜ್ಞರಿದ್ದಾರೆ. ಇಂತಹ ಲಾಂಚಿಂಗ್ ಪ್ರಾಜೆಕ್ಟ್ ನಲ್ಲಿ ಭಾಗವಾಗಿರುವುದು ನನಗೆ ಖುಷಿ ತಂದಿದೆ ಎಂದು ಶ್ರೀಲೀಲಾ ತಿಳಿಸಿದ್ದಾರೆ.
ನಾವು ಫ್ಯಾಮಿಲಿ ಫ್ರೆಂಡ್ಸ್, ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೇವೆ ನನಗೆ ತಿಳಿದಿರುವುದನ್ನು ನಾನು ಖಂಡಿತವಾಗಿ ಹೇಳಿಕೊಡುತ್ತೇನೆ, ಆದರೆ ರವಿಚಂದ್ರನ್ ಅವರಂಥ ಹಿರಿಯ ಕಲಾವಿದರಿದ್ದಾರೆ ಅವರು ಕಿರೀಟಿಗೆ ಮಾರ್ಗದರ್ಶನ ನೀಡಲಿದ್ದಾರೆ, ನಾನು ಕೂ ಅವರಿಂದ ಕಲಿಯಲಿದ್ದೇನೆ ಎಂದು ಹೇಳಿದ್ದಾರೆ.
ನಾನು ಬಾಹುಬಲಿಯನ್ನು ನೋಡಿದ್ದೇನೆ ಮತ್ತು ಸೆಂಥಿಲ್ ಕುಮಾರ್ ಸೆರೆಹಿಡಿದ ದೃಶ್ಯಗಳಿಂದ ವಿಸ್ಮಯಗೊಂಡಿದ್ದೇನೆ, ನಾನು ಯಾವಾಗಲೂ ಡಿಎಸ್‌ಪಿ ಅವರ ಹಾಡುಗಳನ್ನು ಕೇಳುವುದನ್ನು ಆನಂದಿಸುತ್ತೇನೆ ಅಂಥವರ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದಿದ್ದಾರೆ.
ನನ್ನ ವೃತ್ತಿ ಜೀವನ ಇಲ್ಲಿಯವರೆಗೆ ಬಂದು ನಿಂತಿರುವುದಕ್ಕೆ ನನದೆ ಹೆಮ್ಮೆಯಿದೆ. ಇದುವರೆಗೆ ನಾನು ಕೆಲಸ ಮಾಡಿದ ಎಲ್ಲರಿಂದಲೂ ಬಹಳ ಕಲಿತಿದ್ದೇನೆ, ಅವರೆಲ್ಲರಿಗೂ ನನ್ನ ಕೃತಜ್ಞತೆಯಿದೆ ಎಂದು ಶ್ರೀಲೀಲಾ ತಿಳಿಸಿದ್ದಾರೆ.