ಮಾಸ್ ಸಿನಿಮಾ ಪ್ರೇಕ್ಷಕರನ್ನು ಗೌರವಿಸಬೇಕು: 'ಏಕ್ ಲವ್ ಯಾ' ಸಿನಿಮೆಟೊಗ್ರಾಫರ್ ಮಹೇನ್ ಸಿಂಹ
ಮೊದಲ ಬಾರಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ನಾಯಕ ನಾಯಕಿಯರನ್ನು ಸುಂದರವಾಗಿ, ಅದರಲ್ಲೂ ಪ್ರೇಕ್ಷಕಪ್ರಭುಗಳು ಮೆಚ್ಚುವಂತೆ ತೋರಿಸುವುದು ಎಂಥ ನಿಷ್ಣಾತ ಸಿನಿಮೆಟೊಗ್ರಾಫರ್ ಗೂ ಸವಾಲು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮುಗುಳ್ನಗೆ ಬೀರುತ್ತಿರುವವರು ಸಿನಿಮೆಟೊಗ್ರಾಫರ್ ಮಹೇನ್ ಸಿಂಹ.
Published: 06th March 2022 08:00 AM | Last Updated: 05th March 2022 11:46 PM | A+A A-

ಸಿನಿಮೆಟೊಗ್ರಾಫರ್ ಮಹೇನ್ ಸಿಂಹ
- ಹರ್ಷವರ್ಧನ್ ಸುಳ್ಯ
ಮೊದಲ ಬಾರಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ನಾಯಕ ನಾಯಕಿಯರನ್ನು ಸುಂದರವಾಗಿ, ಅದರಲ್ಲೂ ಪ್ರೇಕ್ಷಕಪ್ರಭುಗಳು ಮೆಚ್ಚುವಂತೆ ತೋರಿಸುವುದು ಎಂಥ ನಿಷ್ಣಾತ ಸಿನಿಮೆಟೊಗ್ರಾಫರ್ ಗೂ ಸವಾಲು. ಹೊಸಬರನ್ನು ಹೊಸಬರಂತೆ ಕಾಣಿಸದಿರುವುದು ಅದಕ್ಕಿಂತ ದೊಡ್ಡ ಸವಾಲು. ಈ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮುಗುಳ್ನಗೆ ಬೀರುತ್ತಿರುವವರು ಸಿನಿಮೆಟೊಗ್ರಾಫರ್ ಮಹೇನ್ ಸಿಂಹ.
'ಏಕ್ ಲವ್ ಯಾ' ಸಿನಿಮಾಗಾಗಿ ತಮ್ಮ ಕ್ಯಾಮೆರಾಗಣ್ಣಲ್ಲಿ ಮಹೇನ್ ಸಿಂಹ ಸೆರೆಹಿಡಿದಿರುವ ರಾಣಾ ಮತ್ತು ರೀಷ್ಮಾ ನಾಣಯ್ಯ ಅವರನ್ನು ಜನರು ಸ್ವೀಕರಿಸಿರುವುದು ಅವರಿಗೆ ಎಲ್ಲಿಲ್ಲದ ಖುಷಿ ತಂದಿದೆ. ಇವೆಲ್ಲಾ ಸಾಧ್ಯವಾಗಿದ್ದು ನಿರ್ದೇಶಕ ಪ್ರೇಮ್ ಅವರ ವಿಷನ್ ನಿಂದ ಎಂದು ಹೇಳಲು ಅವರು ಮರೆಯುವುದಿಲ್ಲ. ಇದಕ್ಕೂ ಮುಂಚೆ ಅವರು ಡೈರೆಕ್ಟರ್ ಸ್ಪೆಷಲ್, ಟಗರು, ರುಸ್ತುಂ, ಬೈಟು ಲವ್ ಸಿನಿಮಾಗಳಿಗೆ ಸಿನಿಮೆಟೊಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಉಪೇಂದ್ರ- ವೇದಿಕಾ ಅಭಿನಯದ 'ಹೋಮ್ ಮಿನಿಸ್ಟರ್' ಬಿಡುಗಡೆ ದಿನಾಂಕ ಘೋಷಣೆ: ರಿಯಲ್ ಸ್ಟಾರ್ ಗೆ 'ಅಭಿಮಾನಿಗಳ ಚಕ್ರವರ್ತಿ' ಬಿರುದು
ಮಾಸ್ ಸಿನಿಮಾ ಪ್ರೇಕ್ಷಕರನ್ನು ಗೌರವಿಸಬೇಕು
ಸಾಮಾನ್ಯವಾಗಿ ಮಾಸ್ ಸಿನಿಮಾ ಎಂದಾಕ್ಷಣ ಲಾಜಿಕ್, ತಲೆಬುಡವಿಲ್ಲದ, ಫಿಸಿಕ್ಸ್ ಕೆಮಿಸ್ಟ್ರಿ ಎಲ್ಲಾ ಸೂತ್ರಗಳನ್ನು ತಳಕಂಬಳಕ ಮಾಡಿ ನೋಡಬೇಕಾದ ಸಿನಿಮಾ ಎಂಬ ಭಾವನೆ ಕೆಲವರಲ್ಲಿದೆ. ಅದು ತಪ್ಪು ಎನ್ನುವುದು ಮಹೇನ್ ಸಿಂಹ ಅವರ ಅನುಭವದ ನುಡಿ. ಒಂದು ವೇಳೆ ಹಾಗಂದುಕೊಂಡಿದ್ದೇ ಆದಲ್ಲಿ ಒಂದು ದೊಡ್ಡ ವರ್ಗದ ಪ್ರೇಕ್ಷಕರನ್ನು ಕಳೆದುಕೊಂಡುಬಿಡುತ್ತೇವೆ ಎನ್ನುವ ಹುಷಾರು ಮಹೇನ್ ಸಿಂಹ ಅವರ ಮಾತಿನಲ್ಲಿ ವ್ಯಕ್ತವಾಗುತ್ತದೆ.
ಪ್ರೇಕ್ಷಕರನ್ನು ಕಳೆದುಕೊಂಡುಬಿಡುತ್ತೇವೆ ಎನ್ನುವುದಕ್ಕಿಂತ ಹೆಚ್ಚಾಗಿ being respectful of majority ಆಡಿಯೆನ್ಸ್ ಎನ್ನುವ ಅವರ ಕಾಳಜಿ ಪ್ರಶಂಸಾರ್ಹ. ಸಿಂಹ ಅವರ ಈ ಕಾಳಜಿಯ ಮೂಲ ಪ್ರೇರಕ ಪ್ರೇಮ್. ಸಿನಿಮಾ ನಿರ್ಮಾಣದ ಪ್ರತಿಯೊಂದು ವಿಭಾಗದಲ್ಲೂ ತಮ್ಮ ಸಿನಿಮಾ ನೋಡಲು ಬರುವ ಕಟ್ಟ ಕಡೆಯ ಪ್ರೇಕ್ಷಕನನ್ನು, ಕಾಮನ್ ಮ್ಯಾನ್ ಗಮನದಲ್ಲಿರಿಸಿಕೊಳ್ಳುವವರು ಪ್ರೇಮ್.
ಇದನ್ನೂ ಓದಿ: ಮುಂದೆ ಗುರಿ ಇದೆ, ಬೆನ್ನ ಹಿಂದೆ ಗುರುಗಳಿದ್ದಾರೆ: 'ಏಕ್ ಲವ್ ಯಾ' ನಾಯಕ ರಾಣಾ ಸಂದರ್ಶನ
ಕೈಕೊಟ್ಟ ವಿದೇಶ ಪ್ರಯಾಣ
ಮೊದಲಿಗೆ ಹಾಡುಗಳನ್ನು ವಿದೇಶಗಳಲ್ಲಿ ಚಿತ್ರಿಸುವ ಇರಾದೆಯಿತ್ತು. ಒಂದೊಂದು ಹಾಡಿನಲ್ಲಿ ಒಂದೊಂದು ಬಣ್ಣವನ್ನು ವಿಶಿಷ್ಟವಾಗಿ ತೋರಿಸುವುದೆಂದೂ, ಆಯಾ ನಿರ್ದಿಷ್ಟ ಬಣ್ಣದ ಲೊಕೇಷನ್ನಿಗಾಗಿ ನಾರ್ವೆ ಮುಂತಾದ ವಿದೇಶಗಳನ್ನು ಸಿಂಹ ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದರು. ಆದರೆ ಕೊರೊನಾ ಕಾರಣ ವಿದೇಶ ಪ್ರಯಾಣ ರದ್ದಾಗಿತ್ತು.
ಹೀಗಾಗಿ ಸಿನಿಮಾದ ಲೊಕೇಷನ್ನುಗಳನ್ನು ಪ್ರೇಮ್ ತಮ್ಮ ತಂಡದೊಂದಿಗೆ ಆಯ್ಕೆ ಮಾಡಿ ಬಂದಿದ್ದರು. ಚಿತ್ರೀಕರಣ ಶುರುವಾಗುವ ವೇಳೆಗೆ ತಡವಾಗಿದ್ದರಿಂದ ಚಳಿಗಾಲ ಬಂದು ಲೊಕೇಷನ್ನುಗಳು ಬದಲಾಗಿದ್ದವು. ಎಲ್ಲಾ ಕಡೆ ಹಿಮ ಬಿದ್ದಿತ್ತು. ಅದರ ನಡುವೆಯೂ ಒಂದು ಸಲ ಶೂಟಿಂಗ್ ಮಾಡುವಾಗ ಪ್ರೇಮ್ ಅವರಿಗೆ ಹೈಪೋ ಥರ್ಮಿಯಾ ಆಗಿಬಿಟ್ಟಿತ್ತು.
ಇದನ್ನೂ ಓದಿ: 'ಏಕ್ ಲವ್ ಯಾ'ಚಿತ್ರತಂಡದಿಂದ ಅಪ್ಪು ಭಾವಚಿತ್ರ ಮುಂದೆ ಶಾಂಪೇನ್ ಸಂಭ್ರಮ: ಅಭಿಮಾನಿಗಳ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ
ಪ್ರೇಮ್ ಕಲ್ಪನೆ ಗ್ರ್ಯಾಂಡ್
ಪ್ರೇಮ್ ಅವರು ಪಕ್ಕಾ ಲೋಕಲ್ ಟೈಪ್ ಎನ್ನುವುದು ಕನ್ನಡ ಚಿತ್ರಪ್ರೇಮಿಗಳಿಗೆ ಗೊತ್ತಿರುವ ಸಂಗತಿ. ಏಕ್ ಲವ್ ಯಾಗೆ ಕೆಲಸ ಮಾಡಿದಾಗಲೇ ಅವರೆಷ್ಟು ಡೌನ್ ಟು ಅರ್ಥ್ ಎಂದು ಅರಿವಾಗಿದ್ದು ಅಂತಾರೆ ಮಹೇನ್ ಸಿಂಹ. ಪ್ರತಿಭಾನ್ವಿತರಿಂದ ಕೆಲಸ ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಪ್ರೇಮ್ ಅವರಿಗೆ ತುಂಬಾ ಚೆನ್ನಾಗಿ ಗೊತ್ತು. ಬೇಜಾರಾಗದಂತೆ, ಮ್ಯಾನಿಪ್ಯುಲೇಟ್ ಮಾಡದೆ ಅವರು ಕೆಲಸಗಾರರಿಂದ ಬೆಸ್ಟ್ ಕೆಲಸವನ್ನು ಪಡೆದುಕೊಳ್ಳುವುದು ಅವರ ಸ್ಟೈಲ್. ಸದಾ ಪಾಸಿಟಿವ್ ಆಗಿರುತ್ತಾರೆ.
ಪ್ರೇಮ್ ಅವರ ವಿಷನ್ ತುಂಬಾ ದೊಡ್ಡದಾಗೇ ಇರುತ್ತೆ. ಅವರು ಅಂದುಕೊಂಡ ಹಾಗೆ ಆಗುತ್ತೋ ಬಿಡುತ್ತೋ ಅದು ಸೆಕೆಂಡರಿ. ಬಟ್ ಅವರ ಉದ್ದೇಶ ಮತ್ತು ಕಲ್ಪನೆ ಗ್ರ್ಯಾಂಡ್ ಆಗಿರುತ್ತೆ. ಉದಾಹರಣೆಗೆ ಸಿನಿಮಾದಲ್ಲಿ ಚರಣ್ ರಾಜ್ ನಿರ್ವಹಿಸಿರುವ ಪಾತ್ರಕ್ಕೆ ಪ್ರೇಮ್ ಅವರ ಮೊದಲ ಆಯ್ಕೆ ಇದ್ದಿದ್ದು ಬಾಲಿವುಡ್ ನ ಖ್ಯಾತ ಹಿರಿಯ ನಟರಾದ ಡ್ಯಾನಿ ದೆಂಜೊಂಗ್ಪಾ ಮತ್ತು ಗುಲ್ಷನ್ ಗ್ರೋವರ್. ಕೆಲಸ ಅವರಂದುಕೊಂಡಂತೆ ಆಗದಿದ್ದರೆ ಕೊರಗುತ್ತಾ ಕೂರಲ್ಲ. Alternative option ನೋಡ್ತಾರೆ. ನೆಗೆಟಿವಿಟಿಗೆ ಅವರ ಬಳಿ ಜಾಗವೇ ಇಲ್ಲ. ಸ್ಮೈಲ್ ಮಾಡ್ತಾನೇ ಕೆಲ್ಸ ತಗೋತಾರೆ ಅನ್ನೋದು ಸಿಂಹ ಅವರ ಅನುಭವಕ್ಕೆ ನಿಲುಕಿದ ಸಂಗತಿ.
ಇದನ್ನೂ ಓದಿ: ಸಿನಿಮಾ ಮುಗಿದರೂ ಕಾಡುವ 'ಎ ಫೀಲ್ ದೆಟ್ ನೆವರ್ ಎಂಡ್ಸ್': 'ಏಕ್ ಲವ್ ಯಾ' ಚಿತ್ರವಿಮರ್ಶೆ