ಉಪೇಂದ್ರ ನಿರ್ದೇಶನದ ಮುಂದಿನ ಚಿತ್ರದ ಪೋಸ್ಟರ್ ಬಿಡುಗಡೆ, ಚಿತ್ರದ ಟೈಟಲ್ ಏನು?
ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ನಿರ್ದೇಶನದ ಮುಂದಿನ ಚಿತ್ರದ ಫೋಸ್ಟರ್ ಬಿಡುಗಡೆಯಾಗಿದೆ. ಉಪೇಂದ್ರ ಅವರ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಸ ಚಿತ್ರವನ್ನು ಜಿ. ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ನವೀನ್ ಮನೋಹರ್ ಸಹ ನಿರ್ಮಾಪಕರಾಗಿದ್ದಾರೆ.
Published: 11th March 2022 01:39 PM | Last Updated: 11th March 2022 03:50 PM | A+A A-

ಉಪೇಂದ್ರ ನಿರ್ದೇಶನದ ಮುಂದಿನ ಚಿತ್ರದ ಫೋಸ್ಟರ್
ರಿಯಲ್ ಸ್ಟಾರ್ ಉಪೇಂದ್ರ ಚಿತ್ರ ನಿರ್ದೇಶನದ ಮುಂದಿನ ಚಿತ್ರದ ಫೋಸ್ಟರ್ ಬಿಡುಗಡೆಯಾಗಿದೆ. ಉಪೇಂದ್ರ ಅವರ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವಿರುವ ಹೊಸ ಚಿತ್ರವನ್ನು ಜಿ. ಮನೋಹರನ್ ಹಾಗೂ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ನವೀನ್ ಮನೋಹರ್ ಸಹ ನಿರ್ಮಾಪಕರಾಗಿದ್ದಾರೆ.
ಆದರೆ, ಚಿತ್ರದ ಟೈಟಲ್ ಮಾತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಆಂಗ್ಲ ಭಾಷೆಯ ಯು ಮತ್ತು ಐಯನ್ನು ಒಳಗೊಂಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಬರುತ್ತಿರುವುದನ್ನು ಫೋಸ್ಟರ್ ನಲ್ಲಿ ತೋರಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಉಪೇಂದ್ರ, ಚಿತ್ರರಂಗದಲ್ಲಿ ಉಪ್ರೇಂದ್ರ ಅನ್ನೋ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ, ಶಿಳ್ಳೆ, ಚಪ್ಪಾಳೆಯಲ್ಲಿ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿರುವುದಾಗಿ ತಿಳಿಸಿದ್ದಾರೆ.
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ #nimmaupendra #uppidirects #laharifilm #venusenterrtainers @LahariFilm @kp_sreekanth @LahariMusic pic.twitter.com/YrMlCXyyyS
— Upendra (@nimmaupendra) March 11, 2022