ಕಾಶ್ಮೀರದ ಚಳಿಯಲ್ಲಿ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಶೂಟಿಂಗ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಎ.ಪಿ. ಅರ್ಜುನ್, ನಾಯಕಿ ವೈಭವಿ ಶಾಂಡಿಲ್ಯ ಮತ್ತು ಮಾರ್ಟಿನ್ ಟೀಮ್ ಕಾಶ್ಮೀರದಲ್ಲಿ 7 ಡಿಗ್ರಿ ತಾಪಮಾನದಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿದೆ.
Published: 14th March 2022 12:06 PM | Last Updated: 14th March 2022 12:06 PM | A+A A-

ಮಾರ್ಟಿನ್ ಸಿನಿಮಾ ಸ್ಟಿಲ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಿರ್ದೇಶಕ ಎ.ಪಿ. ಅರ್ಜುನ್, ನಾಯಕಿ ವೈಭವಿ ಶಾಂಡಿಲ್ಯ ಮತ್ತು ಮಾರ್ಟಿನ್ ಟೀಮ್ ಕಾಶ್ಮೀರದಲ್ಲಿ 7 ಡಿಗ್ರಿ ತಾಪಮಾನದಲ್ಲಿ ಸಿನಿಮಾ ಚಿತ್ರೀಕರಣ ನಡೆಸುತ್ತಿದೆ.
15 ದಿನಗಳ ಶೆಡ್ಯೂಲ್ ನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಬೈಕ್ ಚೇಸಿಂಗ್ ಮತ್ತು ಕೆಲವು ರೋಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ, ಶೂಟಿಂಗ್ ನ ಕೆಲವು ಸ್ಟಿಲ್ ಗಳನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ.
ನಾವು ಚೇಸಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಸ್ನೋ ಬೈಕ್ಗಳನ್ನು ಬಳಸಿದ್ದೇವೆ, ಅದರಿಂದ ನಿರ್ಮಾಪಕರಿಗೆ 1.5 ಕೋಟಿ ರೂಪಾಯಿಗಳವರೆಗೆ ವೆಚ್ಚವಾಗಿದೆ. ಬೆಂಗಳೂರಿಗೆ ಹಿಂತಿರುಗುವ ಮೊದಲು ಕಾಶ್ಮೀರದಲ್ಲಿ ಇನ್ನೂ 7 ದಿನಗಳ ಕಾಲ ಚಿತ್ರೀಕರಣ ನಡೆಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ: ಧ್ರುವ ಸರ್ಜಾ
ಇನ್ನು ಕೇವಲ 30 ದಿನಗಳ ಶೂಟಿಂಗ್ ಬಾಕಿ ಇದ್ದು, ಒಂದೇ ಶೆಡ್ಯೂಲ್ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಲು 'ಮಾರ್ಟಿನ್' ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. ಚಿತ್ರತಂಡವು ಈಗ 30 ಪ್ರತಿಶತದಷ್ಟು ಚಿತ್ರೀಕರಣ ಮುಗಿಸಿದ್ದು ಏಪ್ರಿಲ್ ಅಂತ್ಯದ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಲು ಯೋಜಿಸುತ್ತಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಸಿನಿಮಾದಲ್ಲಿ ಅದ್ದೂರಿ ನಂತರ ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಒಂದಾಗುತ್ತಿದ್ದಾರೆ.
ನಿರ್ದೇಶಕರು ಈಗಾಗಲೇ ಲಹರಿ ಸಂಗೀತದ ಆಡಿಯೊ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ. ಕನ್ನಡದಲ್ಲಿ ತಯಾರಾಗಿರುವ ಮಾರ್ಟಿನ್ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಲಿದೆ. ಈ ಪ್ಯಾನ್-ಇಂಡಿಯನ್ ಚಿತ್ರದ ಉಳಿದ ಪಾತ್ರವರ್ಗದ ವಿವರಗಳನ್ನು ಶೀಘ್ರದಲ್ಲೇ ಮಾಡಲಾಗುವುದು.