
ಲೋಕಲ್ ಟ್ರೈನ್ ಸ್ಟಿಲ್
ಮದರಂಗಿ ಕೃಷ್ಣ. ಲವ್ ಮಾಕ್ ಟೇಲ್ ಚಿತ್ರ ನಿರ್ದೇಶನದ ಜತೆ ನಾಯಕನಾಗಿ ಮಿಂಚಿದ ಮದರಂಗಿ ಕೃಷ್ಣ ಈಗ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.
ಈಗ ಕೃಷ್ಣ ಅಭಿನಯದ “ಲೋಕಲ್ ಟ್ರೈನ್” ಎಂಬ ಚಿತ್ರ ಏಪ್ರಿಲ್ 01 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಪತ್ರಿಕಾಗೋಷ್ಠಿಯನ್ನ ಆಯೋಜಿಸಿದ ಚಿತ್ರತಂಡ “ಲೋಕಲ್ ಟ್ರೈನ್” ಚಿತ್ರದ ಟ್ರೈಲರ್ ಅನ್ನು ಪ್ರದರ್ಶಿಸಿತು.
ಲವ್ಮಾಕ್ಟೇಲ್ ಖ್ಯಾತಿಯ ಮದರಂಗಿ ಕೃಷ್ಣ, ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ “ಲೋಕಲ್ಟ್ರೈನ್” ಚಿತ್ರಕ್ಕೆ ರುದ್ರಮುನಿ ವೈ.ಎನ್. ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರೈಲಿನಲ್ಲಿ ಹುಟ್ಟುವ ಪ್ರೇಮಕಥೆ ಲೋಕಲ್ ಟ್ರೈನ್ ಚಿತ್ರದಲ್ಲಿದೆ.
ಇದನ್ನೂ ಓದಿ: ಗಾಜನೂರಿನಲ್ಲಿ ರಾಘವೇಂದ್ರ ರಾಜಕುಮಾರ್ ನಟನೆಯ 'ಖಡಕ್ ಹಳ್ಳಿ ಹುಡುಗರು' ಶೂಟಿಂಗ್!
ರುದ್ರಮಣಿ ನಿರ್ದೇಶನದ, ಲೋಕಲ್ ಟ್ರೈನ್ ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ರೈಲಿನಲ್ಲಿ ಪ್ರಯಾಣಿಸುವ ಜನರ ಸುತ್ತ ಸುತ್ತುತ್ತದೆ. ಸುಬ್ರಾಯ ವಲ್ಲ್ಯ ಅವರ ಬೆಂಬಲದ ಲೋಕಲ್ ಟ್ರೈನ್ನಲ್ಲಿ ಭಜರಂಗಿ ಲೋಕಿ ವಿಲ್ಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದ್ದು, ಲೋಕಲ್ ಟ್ರೈನ್ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ.