'ದಿಯಾ' ಮರಾಠಿ ರಿಮೇಕ್ ಗೆ ಕೆಎಸ್ ಅಶೋಕ್ ಡೈರೆಕ್ಷನ್!
2020 ರಲ್ಲಿ ಒಟಿಟಿಯಲ್ಲಿ ತೆರೆಕಂಡ ರೋಮ್ಯಾಂಟಿಕ್ ಸಿನಿಮಾ ದಿಯಾ ಸಿನಿಮಾ ಮರಾಠಿಗೆ ರಿಮೇಕ್ ಆಗುತ್ತಿದೆ. ಕೃಷ್ಣ ಚೈತನ್ಯ ನಿರ್ಮಾಣದ ದಿಯಾ ಸಿನಿಮಾವನ್ನು ಕೆಎಸ್ ಅಶೋಕ್ ನಿರ್ದೇಶಿಸಿದ್ದರು.
Published: 15th March 2022 01:04 PM | Last Updated: 15th March 2022 02:14 PM | A+A A-

ದಿಯಾ ಮರಾಠಿ ರಿಮೇಕ್
2020 ರಲ್ಲಿ ಒಟಿಟಿಯಲ್ಲಿ ತೆರೆಕಂಡ ರೋಮ್ಯಾಂಟಿಕ್ ಸಿನಿಮಾ ದಿಯಾ ಸಿನಿಮಾ ಮರಾಠಿಗೆ ರಿಮೇಕ್ ಆಗುತ್ತಿದೆ. ಕೃಷ್ಣ ಚೈತನ್ಯ ನಿರ್ಮಾಣದ ದಿಯಾ ಸಿನಿಮಾವನ್ನು ಕೆಎಸ್ ಅಶೋಕ್ ನಿರ್ದೇಶಿಸಿದ್ದರು.
ಚಿತ್ರವು ಇತರ ಒಂದೆರಡು ಭಾಷೆಗಳಲ್ಲಿ ರೀಮೇಕ್ ಆಗಿತ್ತು. ವಿಮರ್ಶಾತ್ಮಕವಾಗಿ ಸಿನಿಮಾ ಮೆಚ್ಚುಗೆ ಪಡೆದಿತ್ತು.
ಇತ್ತೀಚೆಗಷ್ಟೇ ದಿಯಾ ಹಿಂದಿ ಭಾಷೆಯಲ್ಲಿ ಚಿತ್ರೀಕರಣವನ್ನು ಮುಗಿಸಿದ ನಿರ್ದೇಶಕರು ಈಗ ಚಿತ್ರದ ಮರಾಠಿ ರಿಮೇಕ್ ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಕುತೂಹಲಕಾರಿಯಾಗಿ, ಹಿಂದಿ ರಿಮೇಕ್ನಲ್ಲಿ ಆದಿ ಪಾತ್ರವನ್ನು ಪುನರಾವರ್ತಿಸಿದ್ದ ಪೃಥ್ವಿ ಅಂಬರ್ ಮರಾಠಿ ಆವೃತ್ತಿಯಲ್ಲೂ ನಟಿಸಲಿದ್ದಾರೆ.
ದಿಯಾ ಚಿತ್ರದ ಮರಾಠಿ ರೀಮೇಕ್ ಮುಹೂರ್ತ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದು, ಕಳೆದ ವಾರದಿಂದ ಚಿತ್ರೀಕರಣ ನಡೆಯುತ್ತಿದೆ. ಮೈಸೂರು, ಮಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರತಂಡ ಚಿತ್ರೀಕರಣ ನಡೆಸಲಿದೆ. ಪೃಥ್ವಿ ಅಂಬರ್, ಮರಾಠಿ ರಿಮೇಕ್ನಲ್ಲಿ ರಿತಿಕಾ ಶ್ರೋತ್ರಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ಜನಪ್ರಿಯ ಧಾರಾವಾಹಿ ನಟ ಅಜಿಂಕ್ಯಾ ರಾವುತ್ ಅವರು ಕನ್ನಡದಲ್ಲಿ ದೀಕ್ಷಿತ್ ಶೆಟ್ಟಿ ಮಾಡಿದ್ದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕನ್ನಡದಲ್ಲಿ ಪವಿತ್ರಾ ಲೋಕೇಶ್ ನಿರ್ವಹಿಸಿದ್ದ ತಾಯಿಯ ಪಾತ್ರಕ್ಕೆ ಮೃಣಾಲ್ ಕುಲಕರ್ಣಿ ನಟಿಸಲಿದ್ದಾರೆ. ದಿಯಾ ಮರಾಠಿ ಆವೃತ್ತಿಗೆ ಅಮಿತ್ ರಾಜ್ ಸಂಗೀತ ಮತ್ತು ಭಾರ್ಗವ್ ಅವರ ಛಾಯಾಗ್ರಹಣವಿದೆ.