ಐ ಮಿಸ್ ಯೂ: ‘ನೀನೇ ರಾಜಕುಮಾರ’ ಅಪ್ಪು ಬಯೋಗ್ರಫಿ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್ ಭಾವುಕ ನುಡಿ
ಕಿಎರಡು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದರು! ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದಾರೆ.
Published: 16th March 2022 05:13 PM | Last Updated: 16th March 2022 05:21 PM | A+A A-

'ನೀನೇ ರಾಜಕುಮಾರ' ಕೃತಿ ಬಿಡುಗಡೆಗೊಳಿಸಿದ ನಟ ಸುದೀಪ್
ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ’ ಕೃತಿಯನ್ನು ಖ್ಯಾತ ನಟ ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದಾರೆ. ಪತ್ರಕರ್ತ ಡಾ. ಶರಣು ಹುಲ್ಲೂರು ರಚಿಸಿರುವ ಈ ಪುಸ್ತಕ ಬಿಡುಗಡೆಗೂ ಮುನ್ನವೇ ಎರಡನೇ ಮುದ್ರಣ ಕಂಡಿರುವುದು ವಿಶೇಷ.
ಇದನ್ನೂ ಓದಿ: ಬೆಂಗಳೂರು ನಗರ ಸಂಚಾರ ಪೊಲೀಸರ 'ಗುಣಮಟ್ಟದ ಹೆಲ್ಮೆಟ್ ಜಾಗೃತಿ' ಅಭಿಯಾನ: ವಿಡಿಯೊದಲ್ಲಿ ಪುನೀತ್, ಶಿವಣ್ಣ ಸಂದೇಶ
ಕೃತಿ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು, ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದರು. ಅಲ್ಲದೇ ‘ಯಾವತ್ತಿಗೂ ನಾನು ಪುನೀತ್ ಅವರನ್ನು ಮೀಸ್ ಮಾಡಿಕೊಳ್ಳುತ್ತೇನೆ’ ಎಂದರು.
ಇದನ್ನೂ ಓದಿ: 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಟ್ರೇಲರ್ ಬಿಡುಗಡೆ: ಉತ್ತರ ಕನ್ನಡದ ಕುವರನ ಗೆಟಪ್ಪಿನಲ್ಲಿ ಮಿಂಚಿದ ದಿಗಂತ್
ಕಿಚ್ಚ ಸುದೀಪ್ ಅವರ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ 'ತಾಜ್ ಮಹಲ್ 2' ಚಿತ್ರದ ಸಾಂಗ್ಸ್ ಬಿಡುಗಡೆ
ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಾದ ಜಾಕ್ ಮಂಜು ಮತ್ತು ಕುಮಾರ್ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್ ಮತ್ತು ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.
ಇದನ್ನೂ ಓದಿ: 'ಜೇಮ್ಸ್' ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಎಮೋಷನಲ್ ಆದ ರಾಜ್ ಕುಮಾರ್ ಕುಟುಂಬ